ಕಾನೂನನ್ನು ತಡೆಯುವ ಶಕ್ತಿ ನ್ಯಾಯಾಲಯಕ್ಕೆ ಇಲ್ಲ: ಸಿಟಿ ರವಿ

ಕಾನೂನನ್ನು ತಡೆಯುವ ಶಕ್ತಿ ನ್ಯಾಯಾಲಯಕ್ಕೆ ಇಲ್ಲ: ಸಿಟಿ ರವಿ

IK   ¦    Jan 13, 2021 04:40:13 PM (IST)
ಕಾನೂನನ್ನು ತಡೆಯುವ ಶಕ್ತಿ ನ್ಯಾಯಾಲಯಕ್ಕೆ ಇಲ್ಲ: ಸಿಟಿ ರವಿ

 

ಶಿವಮೊಗ್ಗ: ಕೃಷಿ ಕಾಯ್ದೆ ವಿರುದ್ಧ ನಿನ್ನೆಯ ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶ ಗಮನಿಸಿದ್ದೇವೆ. ನ್ಯಾಯಾಲಯದ ಮಧ್ಯಂತರ ಆದೇಶವನ್ನ ಸ್ವಾಗತಿಸುತ್ತೇವೆ. ಆದರೆ ಕಾನೂನನ್ನ ತಡೆಯುವ ಶಕ್ತಿ ನ್ಯಾಯಾಲಯಕ್ಕಿಲ್ಲವೆಂದು ಶಿವಮೊಗ್ಗದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಗುಡುಗಿದ್ದಾರೆ.

 

ಸುದ್ದಿಗೋಷ್ಠಿಯಲ್ಲಿ ಮಾತನಾಡಿ ರೈತರ ಹೋರಾಟದ ಪರವಾಗಿರುವ ಅಂಶಗಳನ್ನು ಉಲ್ಲೇಖಿಸಲಾಗಿದೆ ಸಂವಿಧಾನ ವಿರೋಧಿಯಾಗಿದ್ದರೆ ಮಾತ್ರ ನ್ಯಾಯಾಲಯ ತಡೆಯಬೇಕು. ಅದನ್ನು ನಾವು ನ್ಯಾಯಲಯಕ್ಕೆ ತಿಳಿಸುವ ಕೆಲಸ ಮಾಡುತ್ತೇವೆ.

 

ಮಸೂದೆಗಳನ್ನು ವಾಪಾಸ್ ತೆಗೆದುಕೊಳ್ಳಿ ಎಂದು ಹೇಳುತ್ತಿದ್ದಾರೆ. ಯಾವ ಅಂಶಗಳು ರೈತ ವಿರೋಧಿಯಾಗಿವೆ ತಿಳಿಸಿ ಎಂದರೆ ತಿಳಿಸುತ್ತಿಲ್ಲ

 

ಯಾರು ಕೂಡ ಬೇಡಿಯನ್ನು ಆಭರಣ ಎಂದು ಕರೆಯಲ್ಲ. ರೈತರಿಗೆ ಹಾಕಿದ್ದ ಬೇಡಿಯನ್ನು ಈ ಕಾಯ್ದೆ ಮೂಲಕ ಪ್ರಧಾನಮಂತ್ರಿ ತೆಗೆಯಲು ಹೊರಟಿದ್ದಾರೆ.

ಇದರಲ್ಲಿ ರೈತ ವಿರೋಧಿಯಾಗಿರುವ ಒಂದಂಶವೂ ಇಲ್ಲ ಆದರೂ ವಿರೋಧಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

 

ಸುಧಾರಣೆಯನ್ನು ತಡೆಯಲು ಕೆಲವರು ಬಯಸಿದ್ದಾರೆ.

ಸಚಿವ ಸಂಪುಟ ವಿಸ್ತರಣೆ ವಿಚಾರ..

 

ನೂತನವಾಗಿ ಸಚಿವರಾಗುತ್ತಿರುವವರಿಗೆ ಸ್ವಾಗತಿಸುತ್ತೇನೆ. ಸಚಿವ ಸ್ಥಾನ ನೀಡುವುದು ಮುಖ್ಯಮಂತ್ರಿಯವರ ಪರಮಾಧಿಕಾರ.

ಬಹಳ ಜನರು ಅನುಭವಿಗಳು, ಯೋಗ್ಯತೆ ಇರುವವರು, ಹಿರಿಯರು, ಉತ್ಸಾಹಿಗಳು ಸಚಿವರಾಗುವವರು ಇದ್ದಾರೆ ಎಂದರು.

 

ಈಗ ಯೋಗ ಇರುವವಿಗೆ ಸಚಿವ ಸ್ಥಾನ ಸಿಗುತ್ತಿದೆ.

ಯೋಗ್ಯತೆ ಇರುವವರು ಕೂಡ ಹಲವರಿದ್ದಾರೆ ಎಂದು ರೇಣುಕಾಚಾರ್ಯರ ವಿರುದ್ಧ ಸಿಟಿ ರವಿ ಮಾರ್ಮಿಕವಾಗಿ ನುಡಿದರು.