ಸಾಗರಮಾಲಾ ಯೋಜನೆ ವಿರೋಧಿಸಿ ಮುಂದುವರಿದ ಪ್ರತಿಭಟನೆ

ಸಾಗರಮಾಲಾ ಯೋಜನೆ ವಿರೋಧಿಸಿ ಮುಂದುವರಿದ ಪ್ರತಿಭಟನೆ

SB   ¦    Jan 14, 2020 06:24:02 PM (IST)
ಸಾಗರಮಾಲಾ ಯೋಜನೆ ವಿರೋಧಿಸಿ ಮುಂದುವರಿದ ಪ್ರತಿಭಟನೆ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕಡಲತೀರದಲ್ಲಿ ಸಾಗರಮಾಲಾ ಯೋಜನೆ ಅಡಿಯಲ್ಲಿ ನಡೆಯುತ್ತಿರುವ ಅಲೆ ತಡೆಗೋಡೆ ನಿರ್ಮಾಣ ವಿರೋಧಿಸಿ ನಡೆಯುತ್ತಿರುವ ಮೀನುಗಾರರ ಹೋರಾಟ ಮುಂದುವರಿದಿದೆ.

ಪ್ರತಿಭಟನೆಯ ಭಾಗವಾಗಿ ಸ್ಥಳೀಯ ಮೀನುಗಾರ ಮಹಿಳೆಯರು ಮಂಗಳವಾರ ಸಂಸದ ಅನಂತಕುಮಾರ್ ಹೆಗಡೆ ಹಾಗೂ ಶಾಸಕಿ ರೂಪಾಲಿ ನಾಯ್ಕ ಅವರು ಸ್ಥಳೀಯ ಮೀನುಗಾರರಿಗೆ ಬೆಂಬಲಿಸದೆ, ಸುಮ್ಮನಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿ, ಇಬ್ಬರ ಭಾವಚಿತ್ರಕ್ಕೆ ಸಗಣಿ ಎರಚಿ, ಚಪ್ಪಲಿ ಹಾರ ಹಾಕಿ ಪ್ರತಿಭಟಿಸಿದರು.

ಸ್ಥಳೀಯ ಮೀನುಗಾರರು ಆಕ್ರೋಶದಲ್ಲಿ ಇಬ್ಬರು ಜನಪ್ರತಿನಿಧಿಗಳ ಚಿತ್ರವನ್ನು ಚಪ್ಪಲಿ ಕಾಲಿನಿಂದ ತುಳಿದರು. ಏಟು ಹಾಕಿದರು. ಅವ್ಯಾಚ ಶಬ್ದಗಳಿಂದ ಬೈದು ತಮ್ಮ ಆಕ್ರೋಶವನ್ನು ಹೊರ ಹಾಕಿದರು.

ಬಳಿಕ ನಂತರ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿ ಧರಣಿ ನಡೆಸಿದರು. ಈ ವೇಳೆ ಅನಂತಕುಮಾರ ಹೆಗಡೆ ಭಾವಚಿತ್ರಕ್ಕೆ ಸ್ತ್ರೀ ವೇಷ ಹಾಗೂ ಶಾಸಕಿ ರೂಪಾಲಿ ನಾಯ್ಕ ಭಾವಚಿತ್ರಕ್ಕೆ ಪುರುಷ ವೇಷ ಧರಿಸಿ ಆಕ್ರೋಶ ಹೊರ ಹಾಕಿದರು.

ಇನ್ನೊಂದಡೆ ಇಬ್ಬರ ಭಾವಚಿತ್ರಗಳನ್ನು ತಲೆಕೆಳಗಾಗಿ ನೇತುಹಾಕಿ ಪ್ರತಿಭಟನೆ ನಡೆಸಿದರು. ಪ್ರತಿಭಟನಾ ಸ್ಥಳಕ್ಕೆ ಬಂದ ಬಿಜೆಪಿ ಪ್ರಮುಖರನ್ನು ಮೀನುಗಾರರು ತರಾಟೆಗೆ ತೆಗೆದುಕೊಂಡಿದ್ದು, ಅವರನ್ನು ಏಕವಚನದಲ್ಲಿ ನಿಂದಿಸಿದರು. ಜನಪ್ರತಿನಿಧಿಗಳ ವಿರುದ್ದ ಹಾಗೂ ಸಾಗರಮಾಲಾ ಯೋಜನೆ ಜಾರಿ ಮಾಡುತ್ತಿರುವ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಚುನಾವಣೆಯ ಸಂದರ್ಭದಲ್ಲಿ ಈ ಇಬ್ಬರು ಮತದಾರರು ಮೀನುಗಾರರಿಂದಲೇ ಹೆಚ್ಚು ಮತ ಪಡೆದುಕೊಳ್ಳುತ್ತಾರೆ. ಚುನಾವಣೆ ಇದ್ದಾಗ ಮನೆ ಬಾಗಿಲಿಗೆ ಬಂದು ಮತ ಕೇಳುವ ಇರುವ, ಈಗ ನಮ್ಮ ಹೋರಾಟಕ್ಕೆ ಬೆಂಬಲ ನೀಡುತ್ತಿಲ್ಲ. ಒಮ್ಮೆಯೂ ಸ್ಥಳಕ್ಕೆ ಬಂದು ತಮ್ಮ ಬೇಡಿಕೆಯನ್ನು ಆಲಿಸಲಿಲ್ಲ. ಸ್ಥಳೀಯ ಮೀನುಗಾರರು ಸಮಸ್ಯೆಗಳನ್ನು ಅರಿತಿರುವ ಎಂಪಿ ಹಾಗೂ ಶಾಸಕರು ನಮ್ಮ ನಮ್ಮ ಬೆಂಬಲಕ್ಕೆ ಎಂದೂ ಸಿಗುವುದಿಲ್ಲ ಎಂದು ಮನದಟ್ಟಾಗಿದೆ ಎಂದರು.