ಕಾಸರಗೋಡು ಜಿಲ್ಲೆಯಲ್ಲಿ ಇಂದು 4 ಮಂದಿಗೆ ಕೊರೋನಾ ಸೋಂಕು

ಕಾಸರಗೋಡು ಜಿಲ್ಲೆಯಲ್ಲಿ ಇಂದು 4 ಮಂದಿಗೆ ಕೊರೋನಾ ಸೋಂಕು

SK   ¦    May 23, 2020 06:40:20 PM (IST)
ಕಾಸರಗೋಡು ಜಿಲ್ಲೆಯಲ್ಲಿ ಇಂದು 4 ಮಂದಿಗೆ ಕೊರೋನಾ ಸೋಂಕು

ಕಾಸರಗೋಡು: ಜಿಲ್ಲೆಯಲ್ಲಿ 4 ಮಂದಿಗೆ ಕೋವಿಡ್ ಸೋಂಕು ಖಚಿತಗೊಂಡಿದೆ. ಒಬ್ಬರು ರೋಗದಿಂದ ಗುಣಮುಖರಾಗಿದ್ದಾರೆ. ಒಟ್ಟು 28 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೋಡೋಂ ಬೇಳೂರು ನಿವಾಸಿಗಳಾದ 43, 32 ವರ್ಷ ಪ್ರಾಯದ ವ್ಯಕ್ತಿಗಳು, ಮಂಗಲ್ಪಾಡಿ ನಿವಾಸಿ 55 ವರ್ಷದ ವ್ಯಕ್ತಿ, ಪೈವಳಿಕೆ ನಿವಾಸಿ 35 ವರ್ಷದ ವ್ಯಕ್ತಿಗೆ ಸೋಂಕು ಖಚಿತಗೊಂಡಿದೆ. ಇವರಲ್ಲಿ 32 ವರ್ಷದ ಕೋಡೋಂ ಬೇಳೂರು ನಿವಾಸಿ ಕೊಲ್ಲಿರಾಷ್ಟ್ರ ದಿಂದ ಬಂದವರು. 42 ವರ್ಷದ ಕೋಡೋಂ ಬೇಳೂರು ನಿವಾಸಿ ಪರಿಯಾರಂ ವೈದ್ಯಕೀಯ ಕಾಲೇಜಿನಲ್ಲಿ ದಾಖಲಾಗಿದ್ದಾರೆ. ಮಂಗಲ್ಪಾಡಿ ನಿವಾಸಿ ದುಬಾಯಿಯಿಂದ, ಪೈವಳಿಕೆ ನಿವಾಸಿ ಮಹಾರಾಷ್ಟ್ರ ದಿಂದ ಬಂದವರು.              

ಜಿಲ್ಲೆಯಲ್ಲಿ 2785 ಮಂದಿ ನಿಗಾದಲ್ಲಿದ್ದಾರೆ. ಮನೆಗಳಲ್ಲಿ 2278 ಮಂದಿ, ಆಸ್ಪತ್ರೆಗಳಲ್ಲಿ 507 ಮಂದಿ ನಿಗಾದಲ್ಲಿದ್ದಾರೆ. ಶನಿವಾರ ನೂತನವಾಗಿ 20 ಮಂದಿಯನ್ನು ಐಸೊಲೇಷನ್ ವಾರ್ಡಿಗೆ ದಾಖಲಿಸಲಾಗಿದೆ. 398 ಮಂದಿ ಶನಿವಾರ ನಿಗಾ ಅವಧಿ ಪೂರ್ಣಗೊಳಿಸಿದ್ದಾರೆ.

ಜಿಲ್ಲೆಯಲ್ಲಿ 6094 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 5434 ಮಂದಿಯ ಫಲಿತಾಂಶ ನೆಗೆಟಿವ್ ಆಗಿದೆ. 263 ಮಂದಿಯ ಫಲಿತಾಂಶ ಲಭಿಸಬೇಕಿದೆ.