ಬೈಕ್ ಸವಾರ ಸಾವು:ಪೇದೆಗಳಿಬ್ಬರು ಅಮಾನತು

ಬೈಕ್ ಸವಾರ ಸಾವು:ಪೇದೆಗಳಿಬ್ಬರು ಅಮಾನತು

LK   ¦    Mar 15, 2019 09:53:39 AM (IST)
ಬೈಕ್ ಸವಾರ ಸಾವು:ಪೇದೆಗಳಿಬ್ಬರು ಅಮಾನತು

ಚಾಮರಾಜನಗರ:  ಕರ್ತವ್ಯದಲ್ಲಿ ಲೋಪ ಎಸಗಿ ಬೈಕ್ ಸವಾರನ ಸಾವಿಗೆ ಕಾರಣರಾದ ಮುಖ್ಯ ಪೇದೆ ಸೇರಿದಂತೆ ಇಬ್ಬರು ಪೊಲೀಸರನ್ನು ಎಸ್ಪಿ  ಧರ್ಮೇಂದ್ರ ಕುಮಾರ್ ಮೀನಾ ಸೇವೆಯಿಂದ ಅಮಾನತುಗೊಳಿಸಿದ್ದಾರೆ. 

ಮುಖ್ಯ ಪೇದೆ ರವಿಚಂದ್ರ ಹಾಗೂ ಪೇದೆ ನಾಗೇಂದ್ರ ಅಮಾನತುಗೊಂಡವರಾಗಿದ್ದಾರೆ. 

ಇತ್ತೀಚೆಗೆ ಪೊಲೀಸ್ ಹೈವೇ ಪೆಟ್ರೋಲ್ ವಾಹನ ವೃಥಾ ತಪಾಸಣೆ ಮಾಡುತ್ತಿದ್ದ ಸಂದರ್ಭದಲ್ಲಿ ಲಾರಿಯೊಂದು ಹಿಂದಕ್ಕೆ ಬರುವಾಗ ಪೊಲೀಸ್ ವಾಹನ ತಪಾಸಣೆ ಮಾಡುತ್ತಿದೆ ಎಂದು ಹೆದರಿ ಬೈಕ್‍ನ್ನು ಹಿಂದೆ ತಿರುಗಿಸುವ ವೇಳೆ ಆಯತಪ್ಪಿ ಪತ್ನಿ ಸಮೇತ ಕೆಳಗೆ ಬಿದ್ದ ಸವಾರ ಪರಶಿವಮೂರ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದರೆ ಪತ್ನಿ ತೀವ್ರವಾಗಿ ಗಾಯಗೊಂಡಿದ್ದರು. 

ಘಟನೆಯನ್ನು ಖಂಡಿಸಿ ಸಾರ್ವಜನಿಕರು ಪ್ರತಿಭಟನೆ ನಡೆಸಿ ನ್ಯಾಯನೀಡುವಂತೆ ಕೋರಿದ್ದರು. ಇದನ್ನು ಪರಿಗಣಿಸಿ ಪೊಲೀಸ್ ಇಲಾಖೆ ತನಿಖೆ ನಡೆಸಿದಾಗ ಪೇದೆಗಳಾದ ರವಿಚಂದ್ರ ಮತ್ತು ನಾಗೇಂದ್ರ ಎಂಬುವವರು ಅಕ್ರಮವಾಗಿ ವಾಹನಗಳನ್ನು ತಪಾಸಣೆ ಮಾಡಿ ಹಣ ವಸೂಲಿ ಮಾಡುತ್ತಿದ್ದರೆಂಬುದು ಸಾಬೀತಾದ ಹಿನ್ನೆಲೆಯಲ್ಲಿ ಅವರನ್ನು ಅಮಾನತ್ತು ಮಾಡಿ ಎಸ್ಪಿ ಆದೇಶ ಹೊರಡಿಸಿದ್ದಾರೆ