ಕುಂದಗೋಳದಲ್ಲಿ ಡಿಕೆಶಿ ಆಟ ನಡೆಯಲ್ಲ: ರೇಣುಕಾಚಾರ್ಯ

ಕುಂದಗೋಳದಲ್ಲಿ ಡಿಕೆಶಿ ಆಟ ನಡೆಯಲ್ಲ: ರೇಣುಕಾಚಾರ್ಯ

HSA   ¦    May 15, 2019 04:13:20 PM (IST)
ಕುಂದಗೋಳದಲ್ಲಿ ಡಿಕೆಶಿ ಆಟ ನಡೆಯಲ್ಲ: ರೇಣುಕಾಚಾರ್ಯ

ಹುಬ್ಬಳ್ಳಿ: ಎಂ.ಬಿ.ಪಾಟೀಲ್ ಮತ್ತು ಡಿ.ಕೆ.ಶಿವಕುಮಾರ್ ಉಪಚುನಾವಣೆಯಲ್ಲಿ 50 ಕೋಟಿ ಬಂಡವಾಳ ಹೂಡಿ ಮುಖ್ಯಮಂತ್ರಿ ಆಗುವ ಕನಸು ಕಾಣುತ್ತಿದ್ದಾರೆ ಎಂದು ಬಿಜೆಪಿ ನಾಯಕ ರೇಣುಕಾಚಾರ್ಯ ಆರೋಪಿಸಿದರು.

ರೇಣುಕಾಚಾರ್ಯ ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕುಂದಗೋಳ ಕ್ಷೇತ್ರದಲ್ಲಿ ಶಿವಕುಮಾರ್ ಅವರು ತನ್ನ 500 ಮಂದಿ ಬೆಂಬಲಿಗರನ್ನು ಕರೆದುಕೊಂಡು ಬಂದು ಹಣ ಹಂಚುತ್ತಿದ್ದಾರೆ. ಶಿವಕುಮಾರ್ ಭ್ರಷ್ಟಾಚಾರ ಸಂಪನ್ಮೂಲ ಸಚಿವ ಎಂದರು.

ಕುಂದಗೋಳದ ಹರಕುಣಿಯಲ್ಲಿ ನಿರಂತರ ಜ್ಯೋತಿ ಯೋಜನೆಗೆ ಶಿವಕುಮಾರ್ ಚಾಲನೆ ನೀಡಿದ್ದರು. ಆದರೆ ಈಗಲೂ ಅಲ್ಲಿ ಕತ್ತಲು ಆವರಿಸಿದೆ. ಶಿವಕುಮಾರ್ ಆಟ ಇಲ್ಲಿ ನಡೆಯುವುದಿಲ್ಲ ಎಂದು ತಿಳಿಸಿದರು.