ಬಂಡೀಪುರದ ಮೂಲೆಹೊಳೆಯಲ್ಲಿ ಜೋಡಿ ಹುಲಿಗಳ ದರ್ಶನ

ಬಂಡೀಪುರದ ಮೂಲೆಹೊಳೆಯಲ್ಲಿ ಜೋಡಿ ಹುಲಿಗಳ ದರ್ಶನ

LK   ¦    Jan 14, 2020 06:12:27 PM (IST)
ಬಂಡೀಪುರದ ಮೂಲೆಹೊಳೆಯಲ್ಲಿ ಜೋಡಿ ಹುಲಿಗಳ ದರ್ಶನ

ಗುಂಡ್ಲುಪೇಟೆ: ಮುಂಗಾರು ಮತ್ತು ಹಿಂಗಾರು ಮಳೆ ಬಂಡೀಪುರ ಅರಣ್ಯ ವ್ಯಾಪ್ತಿಯಲ್ಲಿ ಉತ್ತಮವಾಗಿ ಸುರಿದ ಕಾರಣದಿಂದಾಗಿ ಈ ಬಾರಿ ಬಂಡೀಪುರ ಹಸಿರು ಕಾನನಗಳಿಂದ ಕಂಗೊಳಿಸುತ್ತಿದೆ. ಹೀಗಾಗಿ ಸಫಾರಿಗೆ ಬರುವ ಸಫಾರಿಗೆ ಬರುವ ಪ್ರವಾಸಿಗರಿಗೆ ವನ್ಯಪ್ರಾಣಿಗಳ ಚಿನ್ನಾಟ, ಪಕ್ಷಿಗಳ ಕಲರವ, ಹುಲಿ ಘರ್ಜನೆ, ಆನೆಗಳು ಘೀಳಿಡುವ ಸದ್ದು ಮೈಮನ ಪುಳಕಗೊಳಿಸುತ್ತಿದೆ. ಈ ನಡುವೆ ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಅಳವಡಿಸಿರುವ ಕ್ಯಾಮರಾದಲ್ಲಿ ಜೋಡಿ ಹುಲಿಗಳು ಪ್ರತ್ಯಕ್ಷವಾಗಿ ಅಚ್ಚರಿಗೊಳಿಸುತ್ತಿವೆ.

ಬಂಡೀಪುರ ಹುಲಿ ಯೋಜನೆಯ ಮೂಲೆಹೊಳೆ ವ್ಯಾಪಿಯ ಸೋರದಹಳ್ಳ ಬೀಟ್‍ನಲ್ಲಿ ಹುಲಿಗಳೆರಡು ಸೂರ್ಯ ಬೆಳಕು ಬೀಳುವ ಸಮಯದಲ್ಲಿ ಕ್ಯಾಮರಾಗೆ ಎರಡು ಹುಲಿ ಒಂದೇ ಬಾರಿಗೆ ಸೆರೆಯಾಗಿರುವುದು ಖುಷಿ ನೀಡಿದೆ. ಸಾಮಾನ್ಯವಾಗಿ ಮೂಲೆ ಹೊಳೆ ವಲಯದಲ್ಲಿ ಜೋಡಿ ಹುಲಿಗಳು ನೋಡಲು ಸಿಗುವುದು ಅಪರೂಪ. ಆದರೆ ಎರಡು ಹುಲಿಗಳು ಜೊತೆಜೊತೆಯಾಗಿ ಕ್ಯಾಮರಾದಲ್ಲಿ ಸೆರೆಯಾಗಿರುವುದು ಹರ್ಷವನ್ನುಂಟು ಮಾಡಿದೆ. ಇನ್ನು ಅರಣ್ಯ ಇಲಾಖೆಯ ಈ ಕ್ಯಾಮರಾದಲ್ಲಿ ಹಲವಾರು ಭಂಗಿಗಳಲ್ಲಿ ಈ ಹುಲಿಗಳ ಚಿತ್ರಗಳು ಸೆರೆಯಾಗಿದೆ.

ಇನ್ನು ಮೊದಲೆಲ್ಲ ಹುಲಿಗಳು ಕಾಣುವುದೇ ಅಪರೂಪವಾಗಿತ್ತು. ಆದರೆ ಇದೀಗ ಬಂಡೀಪುರದಲ್ಲಿ ಹುಲಿಗಳು  ಕಾಣಿಸುವುದು ಅದರಲ್ಲೂ ಜೊತೆಯಾಗಿ ಕಾಣಿಸುವುದು ಖುಷಿಯ ವಿಚಾರವಾಗಿದೆ. ಈ ಹಿಂದೆÉ ಸಫಾರಿಗೆ ತೆರಳಿದ ಪ್ರವಾಸಿಗರಿಗೆ ಒಂದೇ ಕಡೆ ನಾಲ್ಕು ಹುಲಿಗಳು ನೀರು ಕುಡಿಯುತ್ತಿದ್ದ ದೃಶ್ಯ ಕಂಡು ಬಂದಿತ್ತು. ಬಂಡೀಪುರ ಸುತ್ತ ಮುತ್ತ ಉತ್ತಮ ಮಳೆಯಾಗಿರುವ ಹಿನ್ನೆಲೆಯಲ್ಲಿ ಕೆರೆಗಳೆಲ್ಲಾ ತುಂಬಿದ್ದು, ಪ್ರಾಣಿಗಳಿಗೆ ನೀರಿನ ಸಮಸ್ಯೆ ಇಲ್ಲದಂತಾಗಿದೆ. ಈಗ ಬಂಡೀಪುರದಲ್ಲಿ ಸಫಾರಿಗೆ ತೆರಳುವವರಿಗೆ ಹುಲಿಗಳು ಕಾಣಿಸುತ್ತಿರುವ ವಿಚಾರ ತಿಳಿಯುತ್ತಿದ್ದಂತೆಯೇ ಪ್ರಾಣಿಗಳನ್ನು ನೋಡುವ ಕುತೂಹಲದಿಂದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ ಎನ್ನಲಾಗಿದೆ.