ಸಂಸದ ರಾಜ್ ಮೋಹನ್ ಕಾರು ಚಾಲಕನಿಗೆ ಕೊರೊನಾ ದೃಢ

ಸಂಸದ ರಾಜ್ ಮೋಹನ್ ಕಾರು ಚಾಲಕನಿಗೆ ಕೊರೊನಾ ದೃಢ

SK   ¦    Aug 09, 2020 05:30:16 PM (IST)
ಸಂಸದ ರಾಜ್ ಮೋಹನ್ ಕಾರು ಚಾಲಕನಿಗೆ ಕೊರೊನಾ ದೃಢ

 

ಕಾಸರಗೋಡು : ಸಂಸದ ರಾಜ್ ಮೋಹನ್ ಉಣ್ಣಿ ತ್ತಾನ್ ರವರ  ಕಾರು ಚಾಲಕನಿಗೆ ಕೊರೋನಾ ಸೋಂಕು ದ್ರಢಪಟ್ಟಿದ್ದು , ಈ ಹಿನ್ನಲೆಯಲ್ಲಿ  ಸಂಸದರು ಕ್ವಾರಂಟೈನ್ ಗೆ ತೆರಳಿದ್ದಾರೆ.

ಪ್ರಾಥಮಿಕ ಸಂಪರ್ಕದಿಂದ ಸೋಂಕು ತಗಲಿದೆ ಎನ್ನಲಾಗಿದೆ.  ಸೋಂಕು ಹಿನ್ನಲೆಯಲ್ಲಿ ಸಂಸದರ ಕಚೇರಿ ತಾತ್ಕಾಲಿಕವಾಗಿ ಮುಚ್ಚಲಾಗಿದ್ದು , ಸಂಸದರ ಎಲ್ಲಾ  ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ.

ಕಳೆದ ದಿನ ಇಬ್ಬರೂ ಕೊರೋನಾ ತಪಾಸಣೆ ನಡೆಸಿದ್ದರು . ಆದರೆ ಸಂಸದರ ವರದಿ ನೆಗೆಟಿವ್ ಬಂದಿತ್ತು . ಇದೀಗ ಚಾಲಕನಿಗೆ ಪಾಸಿಟಿವ್ ಕಂಡು ಬಂದ ಹಿನ್ನಲೆಯಲ್ಲಿ ಸಂಸದರು ಕಾಞ೦ ಗಾಡ್ ನಲ್ಲಿ ರುವ ಮನೆಯಲ್ಲಿ ಕ್ವಾರಂಟೈನ್ ಗೆ ತೆರಳಿದ್ದು , ಆರೋಗ್ಯ ಇಲಾಖೆ ಸೂಚಿಸಿದ್ದಲ್ಲಿ ಮತ್ತೆ ಕೊರೋನಾ ತಪಾಸಣೆ ನಡೆಸುವುದಾಗಿ ಸಂಸದರು ತಿಳಿಸಿದ್ದಾರೆ