ಬಿಜೆಪಿ ಯಿಂದ ಭಾಗಮಂಡಲ, ತಲಕಾವೇರಿಯಲ್ಲಿ ವಿಶ್ವ ಪ್ರಕೃತಿ ಸಂರಕ್ಷಣಾ ದಿನಾಚರಣೆ

ಬಿಜೆಪಿ ಯಿಂದ ಭಾಗಮಂಡಲ, ತಲಕಾವೇರಿಯಲ್ಲಿ ವಿಶ್ವ ಪ್ರಕೃತಿ ಸಂರಕ್ಷಣಾ ದಿನಾಚರಣೆ

CI   ¦    Aug 01, 2020 06:34:45 PM (IST)
ಬಿಜೆಪಿ ಯಿಂದ ಭಾಗಮಂಡಲ, ತಲಕಾವೇರಿಯಲ್ಲಿ ವಿಶ್ವ ಪ್ರಕೃತಿ ಸಂರಕ್ಷಣಾ ದಿನಾಚರಣೆ

ಮಡಿಕೇರಿ: ಮಡಿಕೇರಿ ತಾಲೂಕು ಬಿಜೆಪಿ ವತಿಯಿಂದ ರೈತ ಮೋರ್ಚಾದ ಸಹಯೋಗದಲ್ಲಿ ಭಾಗಮಂಡಲದ ತಲಕಾವೇರಿಯಲ್ಲಿ ವಿಶ್ವ ಪ್ರಕೃತಿ ಸಂರಕ್ಷಣಾ ದಿನದ ಅಂಗವಾಗಿ ಸಸಿಗಳನ್ನು ನೆಡಲಾಯಿತು.

ವಿರಾಜಪೇಟೆ ಕ್ಷೇತ್ರದ ಶಾಸಕ ಕೆ. ಜಿ. ಬೋಪಯ್ಯ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭ ರಾಜ್ಯ  ಕಾರ್ಯದರ್ಶಿ ಮನುಮುತ್ತಪ್ಪ, ತಾಲೂಕು ಅಧ್ಯಕ್ಷ ಕಾಂಗೀರ ಸತೀಶ್,  ರೈತ ಮೋರ್ಚದ ಅದ್ಯಕ್ಷ ಜಗದೀಶ್ ಶಿವಚಾಳಿಯಂಡ, ಬಿಜೆಪಿ ತಾಲ್ಲೂಕು  ಪ್ರಧಾನ ಕಾರ್ಯದರ್ಶಿ ಡೀನ್ ಬೋಪ್ಪಣ,  ಕೋಡಿರ ಪ್ರಸನ್ನ, ಸ್ಥಾನೀಯ ಸಮಿತಿ ಅಧ್ಯಕ್ಷ ರಾಜೀವ್, ಯುವ ಮೋರ್ಚಾ ಮಾಜಿ ಜಿಲ್ಲಾಧ್ಯಕ್ಷ ಕಾಳನ ರವಿ, ಯುವ ಮೋರ್ಚಾ ಮಾಜಿ ಖಜಾಂಚಿಗಳಾದ ಕಡ್ಲೇರ ಕೀರ್ತನ್, ಪೋನ್ನಚನ ಮಧು ಹಾಗೂ ವಿವಿಧ ಮೋಚಾ ಗಳ ಅಧ್ಯಕ್ಷರು ಹಾಗೂ ಪಧಾದಿಕಾರಿಗಳು ಕಾರ್ಯಕರ್ತರು ಹಾಜರಿದ್ದರು.