ಕ್ಯಾರಂಟೈನ್ ನಿಯಮ ಉಲ್ಲಂಘಿಸಿದ್ದಲ್ಲಿ ಕಠಿಣ ಕ್ರಮ: ಡಿಸಿ ಸಜಿತ್ ಬಾಬು

ಕ್ಯಾರಂಟೈನ್ ನಿಯಮ ಉಲ್ಲಂಘಿಸಿದ್ದಲ್ಲಿ ಕಠಿಣ ಕ್ರಮ: ಡಿಸಿ ಸಜಿತ್ ಬಾಬು

SK   ¦    Jun 30, 2020 10:19:14 AM (IST)
ಕ್ಯಾರಂಟೈನ್ ನಿಯಮ ಉಲ್ಲಂಘಿಸಿದ್ದಲ್ಲಿ ಕಠಿಣ ಕ್ರಮ: ಡಿಸಿ ಸಜಿತ್ ಬಾಬು

ಕಾಸರಗೋಡು: ಕೊರೋನ ನಿಬಂಧನೆ ಪಾಲಿಸದೆ ವಿದೇಶ ಹಾಗೂ ಇತರ ರಾಜ್ಯಗಳಿಂದ ಜಿಲ್ಲೆಯಲ್ಲಿ ವಾಸ್ತ್ಯವ್ಯ ಕ್ಕೆ ಅನುಮತಿ ಕಲ್ಪಿಸಿದ್ದಲ್ಲಿ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ . ಡಿ . ಸಜಿತ್ ಬಾಬು ತಿಳಿಸಿದ್ದಾರೆ. 

ವಿದೇಶದಿಂದ ವಿಮಾನ ನಿಲ್ದಾಣ ಹಾಗೂ ಹೊರ ರಾಜ್ಯಗಳಿಂದ ರೈಲು ನಿಲ್ದಾಣಕ್ಕೆ ತಲಪುವವರನ್ನು ಕೊರೋನ ನಿಯಂತ್ರಣ ಮಾನದಂಡದಂತೆ ನೇರವಾಗಿ ರೂಂ ಕ್ವಾರಂಟೈನ್ ಅಥವಾ ಸರಕಾರಿ ಸ್ವಾಮ್ಯದ ನಿಗಾ ಕೇಂದ್ರ ದಲ್ಲಿ ವಾಸ್ತವ್ಯಕ್ಕೆ ಆದೇಶ ನೀಡಲಾಗುತ್ತಿದೆ.

ಆದರೆ ಜೂನ್ 27 ರಂದು ವಿದೇಶದಿಂದ ಕಣ್ಣೂರು ವಿಮಾನ ನಿಲ್ದಾಣ ಮೂಲಕ ಮಂಗಳೂರಿಗೆ ತೆರಳಬೇಕಾದ ಹಲವು ಮಂದಿ ಜಿಲ್ಲಾಡಳಿತದ ಅನುಮತಿ ಪಡೆಯದೆಯೇ ನಗರದ ಮೂರು ವಸತಿ ಗ್ರಹಗಳಲ್ಲಿ ವಾಸ್ತವ್ಯ ಹೂಡಿದ್ದು , ಈ ಬಗ್ಗೆ ಪೊಲೀಸ್ , ಆರೋಗ್ಯ ಇಲಾಖೆ , ಕಂದಾಯ ಇಲಾಖೆಗೆ ಮಾಹಿತಿ ನೀಡಿರಲಿಲ್ಲ .

ಈ ಹಿನ್ನಲೆಯಲ್ಲಿ ವಸತಿಗ್ರಹಗಳ ಮಾಲಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ .

ಈ ನಡುವೆ ತಹಶೀಲ್ದಾರರ ಅನುಮತಿ ಪಡೆಯಲು ವಾಸ್ತವ್ಯಕ್ಕೆ ಅನುಮತಿ ನೀಡಲಾಗಿತ್ತು ಎಂಬ ಅಪಪ್ರಚಾರ ನಡೆಸಲಾಗುತ್ತಿದ್ದು , ತಹಶೀಲ್ದಾರ್ ಅನುಮತಿ ನೀಡಿಲ್ಲ ಎಂದು ದ್ರಢಪಟ್ಟಿ ರುವುದಾಗಿ ಜಿಲ್ಲಾಧಿಕಾರಿ ತಿಳಿಸಿ ದ್ದಾರೆ .

ಸರಕಾರದ ಆದೇಶದಂತೆ ಕೋವಿಡ್ 19 ಜಾಗ್ರತಾ ಪೋರ್ಟಲ್ ನಲ್ಲಿ ನೋಂದಣಿ ನಡೆಸದೆ , ಸ್ಥಳೀಯಾಡಳಿತ ಸಂಸ್ಥೆ ಗಳ ಅನುಮತಿ ಪಡೆಯದೇ ವಿದೇಶ ಹಾಗೂ ಹೊರ ರಾಜ್ಯಗಳಿಂದ ಆಗಮಿಸುವವರಿಗೆ ವಾಸ್ತ್ಯವ್ಯಕ್ಕೆ ಅನುಮತಿ ನೀಡಿದ್ದಲ್ಲಿ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ