ರಾಜ್ಯದಲ್ಲಿ ಹಾಗೂ ದೇಶದಲ್ಲಿ ಜೊತೆಗೆ ಜಿಲ್ಲೆಯಲ್ಲಿ ಕಾಂಗ್ರೆಸ್ ಮುಕ್ತ: ಸಂಸದೆ ಶೋಭಾ ಕರದ್ಲಾಂಜೆ

ರಾಜ್ಯದಲ್ಲಿ ಹಾಗೂ ದೇಶದಲ್ಲಿ ಜೊತೆಗೆ ಜಿಲ್ಲೆಯಲ್ಲಿ ಕಾಂಗ್ರೆಸ್ ಮುಕ್ತ: ಸಂಸದೆ ಶೋಭಾ ಕರದ್ಲಾಂಜೆ

IK   ¦    Jan 13, 2021 04:46:11 PM (IST)
ರಾಜ್ಯದಲ್ಲಿ ಹಾಗೂ ದೇಶದಲ್ಲಿ ಜೊತೆಗೆ ಜಿಲ್ಲೆಯಲ್ಲಿ ಕಾಂಗ್ರೆಸ್ ಮುಕ್ತ: ಸಂಸದೆ ಶೋಭಾ ಕರದ್ಲಾಂಜೆ

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯನ್ನ ಕಾಂಗ್ರೆಸ್ ಮುಕ್ತ ಜಿಲ್ಲೆಯನ್ನಾಗಿ ಮಾಡುವಂತೆ ಸಂಸದೆ ಶೋಭಾ ಕರದ್ಲಾಂಜೆ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

 

ಅವರು ನಗರದ ಪೆಸಿಟ್ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾದ ಜನಸೇವಕ ಸಮಾವೇಶದಲ್ಲಿ ಮಾತನಾಡಿದರು. ಸಮಾಜವಾದಿ ಚಿಂತಕರ ನೆಲೆಯಾಗಿದ್ದ ಶಿವಮೊಗ್ಗ ಜಿಲ್ಲೆ ಬಿಜೆಪಿಯ ಹಿರಿಯರ ಶ್ರಮದಿಂದ ಶಿವಮೊಗ್ಗ ಇಂದು ಬಿಜೆಪಿಯ ಭದ್ರಕೋಟೆಯಾಗಿದೆ ಎಂದು ಸಂಸದ ಶೋಭಕರದ್ಲಾಂಜೆ ತಿಳಿಸಿದರು.

 

ಕಾಂಗ್ರೆಸ್, ಸ್ವಜನ ಪಕ್ಷಪಾತದಿಂದ ಕಾಂಗ್ರೆಸ್ ನೆಲಕಚ್ಚಿದೆ. ಅಟಲ್ ಬಿಹಾರಿ ವಾಜಪೇಯಿ ಅವರು ಹಾಕಿಕೊಟ್ಟ ನೆಲೆ ಇಂದು ಮೋದಿಯವರ ಜನಪರ ಯೋಜನೆ ಪಕ್ಷ ಇಷ್ಟು ದೊಡ್ಡ ಹೆಮ್ನರವಾಗಿ ಬೆಳೆದಿದೆ ಎಂದರು.

 

 

ರಾಮ ಮಂದಿರ ನಿರ್ಮಾಣದ ವಿಚಾರದಲ್ಲಿ ಕಾಂಗ್ರೆಸ್ ನಮ್ಮನ್ನ ರಾಜಕೀಯವಾಗಿ ತುಳಿಯಲು ಯತ್ನಿಸಿತು. ಆದರೆ ಇಂದು ರಾಮಮಂದಿರದ ವಿಚಾರದಲ್ಲಿ ನ್ಯಾಯಾಲಯದಲ್ಲಿ ಗೆದ್ದು ಬಂದೆವು. ಬಿರ್ಲಾ ಅವರು, ಅದಾನಿ ಅವರು ಎಷ್ಟು ಕೋಟಿ ಬೇಕು ರಾಮಮಂದಿರ ನಿರ್ಮಾಣಕ್ಕೆ ನಾವು ನೀಡುತ್ತೇವೆ ಎಂದು ಮುಂದೆ ಬಂದಿದ್ದರು ಆದರೆ ನಾವು ತಿರಸ್ಕರಿಸಿ ಜನರಿಂದಲೇ ನಿರ್ಮಿಸಲು ಮುಂದಾಗಿದ್ದೇವೆ ಎಂದರು.

 

ಶೌಚಾಲಯ, ಉಜ್ವಲ ಯೋಜನೆ, ಜನಧನ್ ಯೋಜನೆ ತರಲಾಯಿತು. 15 ನೇ ಹಣಕಾಸು ಯೋಜನೆಯಲ್ಲಿ ಜನಸಂಖ್ಯೆ ಆಧಾರದಮೇರೆಗೆ ಒಂದೊಂದು ಗ್ರಾಪಂಗೆ ತಲಾ ಒಂದು ಕೋಟಿ ಹಣ ಬಿಡುಗಡೆ ಮಾಡಲಾಗಿದೆ ಎಂದರು.

 

ಬಿಜೆಪಿಯಿಂದ ಶಾಸಕರು ಓಡಿ ಹೋಗುವ ಪ್ರಶ್ನೆಯೇ ಇಲ್ಲ, ಏಕೆಂದರೆ ಎರಡೂ ಕಡೆ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಲಾಭ ನಮಗೆ ಆಗಲಿದೆ. ರಾಜ್ಯದಲ್ಲಿ ಹಾಗೂ ದೇಶದಲ್ಲಿ ಜೊತೆಗೆ ಜಿಲ್ಲೆಯಲ್ಲಿ ಕಾಂಗ್ರೆಸ್ ಮುಕ್ತ ಮಾಡುವ ಸಂಕಲ್ಪದೊಂದಿಗೆ ಬಿಜೆಪಿ ಕೆಲಸ ಮಾಡಬೇಕಿದೆ ಎಂದರು.