ನಾನು ಬಿಜೆಪಿ ಸೇರುವುದಿಲ್ಲ, ಪಕ್ಷೇತರಳಾಗಿಯೇ ಉಳಿಯುತ್ತೇನೆ: ಸುಮಲತಾ

ನಾನು ಬಿಜೆಪಿ ಸೇರುವುದಿಲ್ಲ, ಪಕ್ಷೇತರಳಾಗಿಯೇ ಉಳಿಯುತ್ತೇನೆ: ಸುಮಲತಾ

HSA   ¦    Oct 09, 2019 07:14:08 PM (IST)
ನಾನು ಬಿಜೆಪಿ ಸೇರುವುದಿಲ್ಲ, ಪಕ್ಷೇತರಳಾಗಿಯೇ ಉಳಿಯುತ್ತೇನೆ: ಸುಮಲತಾ

ಮಂಡ್ಯ: ನಾನು ಬಿಜೆಪಿ ಸೇರುವ ಸುದ್ದಿ ಹಬ್ಬಿದೆ. ಆದರೆ ನಾನು ಬಿಜೆಪಿ ಸೇರುತ್ತಿಲ್ಲ ಮತ್ತು ಪಕ್ಷೇತರಳಾಗಿಯೇ ಉಳಿಯುತ್ತೇನೆ ಎಂದು ಮಂಡ್ಯ ಸಂಸದೆ ಸುಮಲತಾ ಅವರು ಸ್ಪಷ್ಟಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಸುಮಲತಾ ಅವರು, ಎಚ್.ಡಿ.ಕುಮಾರಸ್ವಾಮಿ ಅವರು ಸಂಸದೆ ಸುಮಲತಾ ಅವರ ಫಾರಿನ್ ಟೂರ್ ಮುಗಿದಿಲ್ಲ ಎಂಬ ಹೇಳಿಕೆ ಉತ್ತರಿಸಿದರು. ಯಾರು, ಏನು ಎಂಬುವುದು ಜನರಿಗೆ ತಿಳಿದಿದೆ. ಕುಮಾರಸ್ವಾಮಿ ಅವರು ಕ್ಯಾಸಿನೋ ಎಂಜಾಯ್ ಮೆಂಟ್ ಬಗ್ಗೆ ತಿಳಿದಿದೆ. ಅವರು ವಿದೇಶದಲ್ಲಿ ಹೇಗಿದ್ದರು ಮತ್ತು ಯಾರಿದ್ದರು ಎಂಬ ಛಾಯಾಚಿತ್ರಗಳು ಈಗಾಗಲೇ ಬಿಡುಗಡೆ ಆಗಿದೆ ಎಂದು ಪ್ರತ್ಯುತ್ತರ ನೀಡಿದರು.

ಚುನಾವಣೆಯಲ್ಲಿ ಗೆಲುವಿಗೆ ಬೆಂಬಲ ನೀಡಿದ್ದ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಲು ಸುಮಲತಾ ಅವರು ಬಿಜೆಪಿ ಕಚೇರಿಗೆ ತೆರಳಿದ್ದರು. ಇದಕ್ಕೆ ಬೆಂಬಲಿಗರು ವಿರೋಧ ವ್ಯಕ್ತಪಡಿಸಿದ್ದರು.