ರಾಯಚೂರು: ಶೇ.15ರಷ್ಟು ಬೆಲೆ ಏರಿಕೆಗೆ ಅವಕಾಶ ನೀಡಿರುವ ಹಿನ್ನೆಲೆಯಲ್ಲಿ ಎರಡು ದಿನಗಳಲ್ಲಿ ಖಾಸಗಿ ಬಸ್ ಗಳು ಸಂಚಾರ ಆರಂಭಿಸಬಹುದು ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದರು.
ಖಾಸಗಿ ಬಸ್ ಮಾಲಕರು ಶೇ.50ರಷ್ಟು ದರ ಹೆಚ್ಚಳಕ್ಕೆ ಬೇಡಿಕೆಯನ್ನಿಟ್ಟಿದ್ದರು. ಆದರೆ ಇದನ್ನು ತಿರಸ್ಕರಿಸಲಾಗಿದೆ. ಖಾಸಗಿ ಬಸ್ ಗಳಲ್ಲಿ ಕೂಡ ಸರ್ಕಾರಿ ಬಸ್ ಗಳಂತೆ ಎಲ್ಲಾ ನಿಯಮಗಳನ್ನು ಅನುಸರಿಸಬೇಕು ಎಂದು ಸವದಿ ಹೇಳಿದರು.
ಸರ್ಕಾರಿ ಬಸ್ ಸಂಚಾರವನ್ನು ನಾವು ಸೇವಾ ಮನೋಭಾವದಿಂದ ಆರಂಭ ಮಾಡಿದ್ದೇವೆ ಮತ್ತು ಪ್ರಯಾಣಿಕರಿಂದ ಹೆಚ್ಚಿನ ಹಣ ವಸೂಲಿಗೆ ಅವಕಾಶ ನೀಡುವುದಿಲ್ಲ ಎಂದು ತಿಳಿಸಿದರು.