ಈಜಲು ಕಾವೇರಿ ನದಿಗಿಳಿದ ಮೂವರು ಜಲಸಮಾಧಿ

ಈಜಲು ಕಾವೇರಿ ನದಿಗಿಳಿದ ಮೂವರು ಜಲಸಮಾಧಿ

HSA   ¦    Feb 14, 2020 04:09:36 PM (IST)
ಈಜಲು ಕಾವೇರಿ ನದಿಗಿಳಿದ ಮೂವರು ಜಲಸಮಾಧಿ

ಶ್ರೀರಂಗಪಟ್ಟಣ: ಕಾವೇರಿ ನದಿಯಲ್ಲಿ ಈಜಲು ಹೋದು ಮೂರು ಮಂದಿ ಯುವಕರು ಜಲಸಮಾಧಿಯಾದ ಘಟನೆಯು ಶುಕ್ರವಾರ ನಡೆದಿದೆ.

ಮೃತರನ್ನು ಮುಜಾಸಿಮ್(17), ತೌಸೀಫ್(17) ಮತ್ತು ಇಫ್ತಿಕಾರ್(18) ಎಂದು ಗುರುತಿಸಲಾಗಿದೆ. ಇವರು ಪಟ್ಟಣದ ರೈಲು ನಿಲ್ದಾಣ ಸಮೀಪ ಕಾವೇರಿ ನದಿಯಲ್ಲಿ ಈಜಲು ಹೋಗಿದ್ದರು.

ಮೂರು ಮಂದಿ ಕೂಡ ಹಾಸನ ಜಿಲ್ಲೆಯ ಅರಸೀಕೆರೆಯವರು ಎಂದು ತಿಳಿದುಬಂದಿದೆ. ಈ ಬಗ್ಗೆ ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.