ದಕ್ಷಿಣ ಕನ್ನಡ ಜಿಲ್ಲೆಗೆ ಪ್ರಯಾಣಿಸಲು ಕಾಸರಗೋಡು ಡಿಸಿ ಅನುಮತಿ

ದಕ್ಷಿಣ ಕನ್ನಡ ಜಿಲ್ಲೆಗೆ ಪ್ರಯಾಣಿಸಲು ಕಾಸರಗೋಡು ಡಿಸಿ ಅನುಮತಿ

SK   ¦    Aug 10, 2020 08:50:06 AM (IST)
ದಕ್ಷಿಣ ಕನ್ನಡ ಜಿಲ್ಲೆಗೆ ಪ್ರಯಾಣಿಸಲು ಕಾಸರಗೋಡು ಡಿಸಿ ಅನುಮತಿ

ಕಾಸರಗೋಡು : ಕಾಸರಗೋಡಿ ನಿಂದ ದಕ್ಷಿಣ ಕನ್ನಡಕ್ಕೆ ದಿನಂಪ್ರತಿ ತೆರಳುವ ವರಿಗೆ ಪ್ರಯಾಣಕ್ಕೆ ಅನುಮತಿ ನೀಡಿ ಕಾಸರಗೋಡು ಜಿಲ್ಲಾಧಿಕಾರಿ ಡಾ. ಸಜಿತ್ ಬಾಬು ಮಾರ್ಗಸೂಚಿಗಳನ್ನು ಹೊರಡಿಸಿದ್ದಾರೆ.

ಖಾಯಂ ಆಗಿ ತೆರಳುವವರಿಗೆ ಅನುಕೂಲವಾಗುವಂತೆ ನೋಂದಣಿಯನ್ನು ಗಡಿಯಾದ ತಲಪಾಡಿಯಲ್ಲಿ ವ್ಯವಸ್ಥೆ ಮಾಡಲಾಗಿದೆ . ದಕ್ಷಿಣ ಕನ್ನಡಕ್ಕೆ ದಿನಂಪ್ರತಿ ತೆರಳುವವ ರಿಗೆ ಹಾಗೂ ದಕ್ಷಿಣ ಕಣ್ಣದಿಂದ ಕಾಸರಗೋಡಿಗೆ ಮರಳುವವರಿಗೆ ತಲಪಾಡಿಯಲ್ಲಿ ನೋಂದಣಿ ಯನ್ನು ಡಾಟಾ ಎಂಟ್ರಿ ಟೀಮ್ ನಡೆಸಲಿದೆ .

ಕೋವಿಡ್ 19 ಜಾಗ್ರತಾ ಪೋರ್ಟಲ್ ನಲ್ಲಿ ಡೈಲಿ ಪಾಸ್ ವಿಭಾಗದಲ್ಲಿ ನೋಂದಣಿ ಮಾಡಲಿದೆ . ಇದರ ಜೊತೆ ಆಂಟಿಜನ್ ಟೆಸ್ಟ್ ನೆಗಟಿವ್ ಪ್ರಮಾಣ ಪತ್ರ ಸಲ್ಲಿಸಬೇಕು . ಈ ಪ್ರಮಾಣ ಪತ್ರ ವನ್ನು ತಲಪಾಡಿ ಗಡಿಯಲ್ಲಿ ಜಿಲ್ಲಾ ವೈದ್ಯಾಧಿಕಾರಿ ನೇತೃತ್ವದಲ್ಲಿ ನಡೆಯುವ ಆಂಟಿಜನ್ ತಪಾಸಣೆ ನಡೆಸಿ ನೀಡಲಾಗುವುದು. ಇದಲ್ಲದೆ ಉದ್ಯೋಗಕ್ಕೆ ತೆರಳುವವರು ಸಂಸ್ಥೆಯ ಮಾಲಕನ ಹೆಸರು , ಕಚೇರಿ ವಿಳಾಸ ಹಾಗೂ ಸಂಸ್ಥೆಯ ಗುರುತು ಚೀಟಿ ಯನ್ನು ಕಡ್ಡಾಯವಾಗಿ ತೋರಿಸಬೇಕು . ಅರೋಗ್ಯ ಇಲಾಖೆ ಕೆಲವೇ ನಿಮಿಷದಲ್ಲಿ ತಪಾಸಣೆ ಪ್ರಮಾಣ ಪತ್ರ ನೀಡಲಿದೆ .

ಡಾಟಾ ಎಂಟ್ರಿ ಟೀಮ್ ಆ ವ್ಯಕ್ತಿಯ ಮಾಹಿತಿ , ದಾಖಲೆ ಹಾಗೂ ಆಂಟಿಜನ್ ಟೆಸ್ಟ್ ವರದಿಯನ್ನು ಕೋವಿಡ್ 19 ಜಾಗ್ರತಾ ಪೋರ್ಟಲ್ ನಲ್ಲಿ ಅಪ್ ಲೋಡ್ ಮಾಡಲಿ ದ್ದು, ಕೆಲವೇ ಕ್ಷಣದಲ್ಲಿ ದೈನಂದಿನ ಪಾಸ್ ನೀಡಲಿದೆ. ಪ್ರತಿ ಏಳು ದಿನಗಳಿಗೊಮ್ಮೆ ಪ್ರಯಾಣಿಕ ಈ ಮಾರ್ಗಸೂಚಿಯನ್ನು ಪಾಲಿಸಬೇಕಿದೆ . ಇನ್ನೊಂದು ಆದೇಶ ನೀಡುವ ತನಕ ಇದು ಮುಂದುವರಿಯಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ .
ಕೊರೋನ ಹಿನ್ನಲೆಯಲ್ಲಿ ಉಭಯ ಜಿಲ್ಲೆಗಳ ಸಂಪರ್ಕ ಬಂದ್ ಮಾಡಲಾಗಿತ್ತು . ಈ ಹಿಂದೆ ಪಾಸ್ ಮೂಲಕ ಪ್ರಯಾಣಕ್ಕೆ ಅನುಮತಿ ನೀಡಿ ದ್ದರೂ ಸೋಂಕು ಹೆಚ್ಚಳ ಗೊಂಡ ಹಿನ್ನೆಲೆಯಲ್ಲಿ ರದ್ದುಗೊಳಿಸಲಾಗಿತ್ತು .ಇದೀಗ ಜಿಲ್ಲಾಡಳಿತ ಮತ್ತೆ ಪಾಸ್ ನೀಡಲು ಮುಂದಾಗಿದ್ದು , ಸಾವಿರಾರು ಮಂದಿಗೆ ಪ್ರಯೋಜನ ಲಭಿಸಲಿದೆ.