ನ.22ರಂದು ಕೇರಳ ಖಾಸಗಿ ಬಸ್ ಮುಷ್ಕರ

ನ.22ರಂದು ಕೇರಳ ಖಾಸಗಿ ಬಸ್ ಮುಷ್ಕರ

SK   ¦    Oct 22, 2019 04:58:56 PM (IST)
ನ.22ರಂದು ಕೇರಳ ಖಾಸಗಿ ಬಸ್ ಮುಷ್ಕರ

ಕಾಸರಗೋಡು: ಪ್ರಯಾಣ ದರ ಏರಿಕೆ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ನವಂಬರ್ 22ರಂದು ರಾಜ್ಯದಾದ್ಯಂತ  ಮುಷ್ಕರ ನಡೆಸಲು ಕೇರಳ ಖಾಸಗಿ ಬಸ್ಸು ಮಾಲಕರ ಸಂಘ ತೀರ್ಮಾನಿಸಿದೆ.

ಬೇಡಿಕೆ ಈಡೇರಿಸದಿದ್ದಲ್ಲಿ  ಅನಿರ್ಧಿಷ್ಟಾವಧಿ ಮುಷ್ಕರ ನಡೆಸುವುದಾಗಿ ಸಂಘ ಮುನ್ನೆಚ್ಚರಿಕೆ ನೀಡಿದೆ.

ಕನಿಷ್ಠ ಪ್ರಯಾಣ ದರವನ್ನು ಎಂಟು ರೂ. ನಿಂದ ಹತ್ತು ರೂ. ಗೆ ಹೆಚ್ಚಿಸಬೇಕು, ವಿದ್ಯಾರ್ಥಿಗಳ ರಿಯಾಯಿತಿ ಪ್ರಯಾಣದ ದರವನ್ನು ಶೇಕಡಾ 50ಕ್ಕೆ ಏರಿಕೆ ಮಾಡಬೇಕು ಮೊದಲಾದ ಬೇಡಿಕೆ ಗಳನ್ನು ಮುಂದಿಟ್ಟು ಕೊಂಡು ಮುಷ್ಕರ ನಡೆ ಸಲಿದೆ.