ಬೆಳಗಾವಿ: ಕೋವಿಡ್-೧೯ ಹತ್ತೂ ಪ್ರಕರಣಗಳ ವರದಿ ನೆಗೆಟಿವ್

ಬೆಳಗಾವಿ: ಕೋವಿಡ್-೧೯ ಹತ್ತೂ ಪ್ರಕರಣಗಳ ವರದಿ ನೆಗೆಟಿವ್

YK   ¦    Mar 26, 2020 08:45:08 AM (IST)
ಬೆಳಗಾವಿ: ಕೋವಿಡ್-೧೯ ಹತ್ತೂ ಪ್ರಕರಣಗಳ ವರದಿ ನೆಗೆಟಿವ್

ಬೆಳಗಾವಿ: ಕೋವಿಡ್-೧೯ ಸೋಂಕಿಗೆ ಸಂಬಂಧಿಸಿದಂತೆ ಜಿಲ್ಲೆಯಿಂದ ಇದುವರೆಗೆ ಪ್ರಯೋಗಾಲಯಕ್ಕೆ ಕಳಿಸಲಾಗಿದ್ದ ಎಲ್ಲ ಹತ್ತೂ ವರದಿಗಳು ನೆಗೆಟಿವ್ ಬಂದಿರುತ್ತವೆ ಎಂದು ಜಿಲ್ಲಾಧಿಕಾರಿ ಡಾ.ಎಸ್. ಬಿ.ಬೊಮ್ಮನಹಳ್ಳಿ ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಇದುವರೆಗೆ ಹತ್ತು ಐದು ಜನರ ಗಂಟಲು ದ್ರವಗಳ ಮಾದರಿಯನ್ನು ಪರೀಕ್ಷೆಗೆ ಕಳಿಸಲಾಗಿತ್ತು.

 

ಈಗಾಗಲೇ ಐದು ಮಾದರಿಗಳ ವರದಿಗಳು ನೆಗೆಟಿವ್ ಬಂದಿದ್ದವು. ಹೊಸದಾಗಿ ಕಳಿಸಲಾಗಿದ್ದ ಉಳಿದ ಐದು ಮಾದರಿಗಳ ವರದಿ ಇಂದು ಬುಧವಾರ (ಮಾ.೨೫) ಬಂದಿದ್ದು, ಅವು ಕೂಡ ನೆಗೆಟಿವ್ ಬಂದಿರುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

 

ಬೆಂಗಳೂರಿನ ಪ್ರಯೋಗಾಲಯದಿಂದ ಬುಧವಾರ(ಮಾ.೨೫) ಲಭಿಸಿರುವ ವರದಿ ಪ್ರಕಾರ ಹೊಸದಾಗಿ ಕಳಿಸಲಾಗಿರುವ ಎಲ್ಲ ಐದೂ ಮಾದರಿಗಳ ಫಲಿತಾಂಶ ನೆಗೆಟಿವ್ ಬಂದಿರುತ್ತದೆ.

 

ಈ ಮುಂಚೆ ಎರಡು ಮಾದರಿ ಬೆಂಗಳೂರು ಹಾಗೂ ಮೂರು ಮಾದರಿಗಳನ್ನು ಶಿವಮೊಗ್ಗ ಪ್ರಯೋಗಾಲಯಕ್ಕೆ ಕಳಿಸಲಾಗಿತ್ತು. ಅವು ಕೂಡ ನೆಗೆಟಿವ್ ಬಂದಿದ್ದವು. ಇದೀಗ ಜಿಲ್ಲೆಯಿಂದ ಕಳಿಸಲಾದ ಎಲ್ಲ ಹತ್ತೂ ಮಾದರಿಗಳ ವರದಿ ನೆಗೆಟಿವ್ ಬಂದಿರುತ್ತದೆ. ಜನರು ಆತಂಕಕ್ಕೆ ಒಳಗಾಗದೇ ಸರ್ಕಾರದ ಸೂಚನೆ ಮೇರೆಗೆ ಎಲ್ಲ ರೀತಿಯ ಮುನ್ನೆಚ್ವರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ಅವರು ತಿಳಿಸಿದ್ದಾರೆ.