News Karnataka Kannada
Thursday, April 25 2024
Cricket
ಸಂಪಾದಕರ ಆಯ್ಕೆ

ಉಡಾವಣೆಗೆ ಸಜ್ಜಾದ ಇಸ್ರೋ : ಮೂರು ಉಪಗ್ರಹ ಹೊತ್ತು ನಭಕ್ಕೆ ಚಿಮ್ಮಲಿದೆ ಪಿಎಸ್ಎಲ್‌ವಿ-ಸಿ52

Rocket Launch
Photo Credit :

ಭಾರತೀಯ ಬಾಹ್ಯಾಕಾಶ ಸಂಸ್ಥೆ ನಾಳೆ ಫೆ.14ರಂದು ಪಿಎಸ್‌ ಎಲ್‌ ವಿ-ಸಿ 52 ರಾಕೆಟ್‌ ಉಡಾವಣೆಗೊಳ್ಳಲು ಸಜ್ಜಾಗಿದೆ. ಈ ರಾಕೆಟ್ ಮೂಲಕ ಎರಡು ರಾಡಾರ್‌ ಇಮೇಟಿಂಗ್‌ ಉಪಗ್ರಹ ರಿಸಾಟ್‌ 1ಎ ಸೇರಿ ಮೂರು ಉಪಗ್ರಹಗಳನ್ನು ಉಡಾವಣೆ ಮಾಡಲಾಗುತ್ತದೆ.

ಇದರೊಂದಿಗೆ ಭೂ ವೀಕ್ಷಣಾ ಉಪಗ್ರಹದ ಮೂಲಕ ಕೃಷಿ, ಅರಣ, ಮಣ್ಣಿನ ತೇವಾಂಶ ಮತ್ತು ಜಲವಿಜ್ಞಾನ ಮತ್ತು ಪ್ರವಾಹದ ಕುರಿತು ಮಾಹಿತಿ ಸಿಗಲಿದೆ. ಇದು 5 ವರ್ಷಗಳ ಕಾಲ ಕಾರ್ಯಾಚರಣೆ ನಡೆಸಲಿದ್ದು, ಪ್ರತಿ ಹಗಲು ರಾತ್ರಿ ಕಾರ್ಯನಿರ್ವಹಿಸಿ, ಯಾವುದೇ ಪ್ರತಿಕೂಲ ಹವಾಮಾನದ ಮಾಹಿತಿಯನ್ನು ರವಾನಿಸುತ್ತದೆ.

ಈ ಉಪಗ್ರಹದ ಇಂಜಿನ್‌ ಗೆ ವಿವಿಧ ರೀತಿಯ ಇಂಧನ ತುಂಬಲಾಗುತ್ತದೆ. ಮೊದಲ ಮತ್ತು ಮೂರನೇ ಹಂತದಲ್ಲಿ ಘನ ಇಂಧನ ಹಾಗೂ ಎರಡು ಮತ್ತು ನಾಲ್ಕನೇ ಹಂತದಲ್ಲಿ ದ್ರವ ಇಂಧನ ತುಂಬಲಾಗುತ್ತದೆ.

ಈ ರಾಕೆಟ್‌ 44.4 ಮೀಟರ್‌ ಎತ್ತರವಾಗಿದ್ದು, 321 ಟನ್‌ ತೂಕ ಇರಲಿದೆ. ಇದಕ್ಕೆ 9 ಟನ್‌ ಇಂಧನ ತುಂಬಿಸಲಾಗುತ್ತದೆ. ಜತೆಗೆ 6 ಬೂಸ್ಟರ್‌ ಮೋಟರ್‌ ಗಳನ್ನು ಹೊಂದಿರುತ್ತದೆ. ಸೋಮವಾರ ಬೆಳಗ್ಗೆ 5:59ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಉಡಾವಣಾ ಪ್ಯಾಡ್‌ ಮೂಲಕ ಉಡಾವಣೆಗೊಳ್ಳಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು