NewsKarnataka
Wednesday, January 26 2022

ಸಂಪಾದಕರ ಆಯ್ಕೆ

ಅತಿ ಹೆಚ್ಚು ಸ್ಪ್ಯಾಮ್‌ ಕಾಲ್ಸ್‌ ಮಾಡಿದ ದೇಶಗಳ ಪಟ್ಟಿಯಲ್ಲಿ ಭಾರತಕ್ಕೆ 4ನೇ ಸ್ಥಾನ

ಜಗತ್ತಿನಲ್ಲಿ ಅತ್ಯಂತ ಹೆಚ್ಚು ಸ್ಪ್ಯಾಮ್‌ ಕರೆಗಳನ್ನು ಮಾಡಿದ ದೇಶಗಳ ಪಟ್ಟಿಯಲ್ಲಿ ಭಾರತ ನಾಲ್ಕನೇ ಸ್ಥಾನ ಪಡೆದಿದೆ. ಟ್ರೂ ಕಾಲರ್‌ ನಡೆಸಿದ ಹೊಸ ಸ್ಪ್ಯಾಮ್‌ ಕಾಲ್ಸ್‌ ಗಳ ಕುರಿತಾದ ಅಧ್ಯಯನದಲ್ಲಿ ಈ ಮಾಹಿತಿ ಬೆಳಕಿಗೆ ಬಂದಿದೆ. ಅತಿ ಹೆಚ್ಚು ಸ್ಪ್ಯಾಮ್‌ ಕರೆಗಳಿಗೆ ಗುರಿಯಾಗುವ 20 ರಾಷ್ಟ್ರಗಳ ಪಟ್ಟಿಯನ್ನು ಟ್ರೂ ಕಾಲರ್‌ ಬಿಡುಗಡೆ ಮಾಡಿದ್ದು, ಅದರಲ್ಲಿ ಭಾರತ ನಾಲ್ಕನೇ ಸ್ಥಾನ ಪಡೆದಿದೆ.

ಕಳೆದ ವರ್ಷ 9ನೇ ಸ್ಥಾನದಲ್ಲಿದ್ದ ಭಾರತ ಈಗ 4ನೇ ಸ್ಥಾನಕ್ಕೆ ಬಂದಿದೆ. ಅಂದರೆ ಕಳೆದ ವರ್ಷಕ್ಕಿಂತ ಈ ವರ್ಷ ಸ್ಪ್ಯಾಮ್‌ ಕರೆಗಳ ಪರಿಣಾಮ ಹೆಚ್ಚಾಗಿದೆ ಎಂದು ತಿಳಿದುಬಂದಿದೆ.

ಬ್ರೆಜಿಲ್‌, ಪೆರು ಹಾಗೂ ಉಕ್ರೇನ್‌ ಬಳಿಕ ಭಾರತ ನಾಲ್ಕನೇ ಸ್ಥಾನದಲ್ಲಿದೆ. ಬ್ರೆಜಿಲ್‌ ತಿಂಗಳಿಗೆ 3-3.5 ಬಿಲಿಯನ್‌ ಗೂ ಹೆಚ್ಚು  ಸ್ಪ್ಯಾಮ್‌ ಕರೆಗಳನ್ನು ಪಡೆಯುವ ಮೂಲಕ ಮೊದಲ ಸ್ಥಾನದಲ್ಲಿದೆ.

ಟ್ರೂ ಕಾಲರ್‌ 184.5 ಬಿಲಿಯನ್‌ ಸ್ಪ್ಯಾಮ್‌ ಕರೆಗಳು, 586 ಬಿಲಿಯನ್‌ ಸ್ಪ್ಯಾಮ್ ಮೆಸೇಜ್‌ ಗಳನ್ನು ಪತ್ತೆ ಮಾಡಿದೆ. ಅದರಲ್ಲಿ 7.8 ಬಿಲಿಯನ್‌ ಕರೆಗಳನ್ನು ಗುರುತಿಸಿ ಬ್ಲಾಕ್‌ ಮಾಡಲಾಗಿದ್ದು, 182 ಬಿಲಿಯನ್‌ ಮೆಸೇಜ್‌ ಗಳನ್ನು ಬ್ಲಾಕ್‌ ಮಾಡಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.