News Kannada
Saturday, March 25 2023

ಸಂಪಾದಕರ ಆಯ್ಕೆ

ನಾಳಿನ ಕೇಂದ್ರ ಬಜೆಟ್ ಹೇಗಿರಬಹುದು..?, ಅಪೇಕ್ಷೆಗಳೇನು..?

What will tomorrow's Union Budget look like?, What are the aspirations?
Photo Credit : Freepik

ಕೇಂದ್ರದ ಅರ್ಥ ಸಚಿವೆ ನಿರ್ಮಲಾಸೀತಾರಾಮನ್ ಅವರು ಲೋಕಸಭೆಯಲ್ಲಿ 2023-24 ನೇ ಹಣಕಾಸು ವರ್ಷದ ಮುಂಗಡಪತ್ರ ಮಂಡನೆಯ ಭಾಷಣ ಆರಂಭಿಸುತ್ತಾರೆ. ಈ ವರ್ಷದ ಬಜೆಟ್ ತಯಾರಿಕೆ ದೊಡ್ಡ ಸವಾಲೇ ಆಗಿದ್ದು, ಅವರ ಸಾಮರ್ಥ್ಯದ ಪರೀಕ್ಷೆಯೂ ಹೌದು.

ಒಂದೆಡೆ ಅರ್ಥ ವ್ಯವಸ್ಥೆ ಕೊವಿಡ್ ನಂತರ ಆಶಾದಾಯಕವಾಗಿ ಚೇತರಿಸಿಕೊಳ್ಳುತ್ತಿದ್ದು, ಅದು ಸುಸ್ಥಿರಗೊಳ್ಳಲು ಹೆಚ್ಚು ಬಂಡವಾಳ ಹೂಡಿಕೆಗಳ ಅವಶ್ಯಕತೆ ಇದೆ. ಸರ್ಕಾರ ಕೈಬಿಟ್ಟ ಖರ್ಚು ಮಾಡಬೇಕಿದೆ. ಇನ್ನೊಂದಡೆಕೋಶೀಯ ಶಿಸ್ತು ಪಾಲಿಸುವ ಹೊಣೆ ಇದ್ದು ಕೋಶೀಯ ಕೊರತೆಯನ್ನು (ಸಾಲ ಮಾಡುವುದನ್ನು ನಿಯಂತ್ರಣದಲ್ಲಿಇಡಬೇಕಾಗಿದೆ. ಇನ್ನು ಆದಾಯ ತೆರಿಗೆದಾರರು ಸೇರಿದಂತೆ ವಿವಿಧ ಆರ್ಥಿಕ ವಲಯಗಳ ಬೇಡಿಕೆಗಳು, ನಿರೀಕ್ಷೆಗಳು ಮತ್ತು ಆಶಯಗಳು ಈಗಾಗಲೇ ಅರ್ಥ ಸಚಿವರನ್ನು ತಲುಪಿವೆ. ಇದು ಈ ಸರ್ಕಾರದ ಕೊನೆಯ ಮತ್ತು ಚುನಾವಣಾ ಪೂರ್ವ ಪೂರ್ಣಾವಧಿ ಬಜೆಟ್ ಆಗಿರುವುದರಿಂದ ಮತದಾರರನ್ನುಓಲೈಸಲು ಜನಪ್ರಿಯ ಯೋಜನೆಗಳಪ್ರಕಟಣೆಯು ರಾಜಕೀಯವಾಗಿ ಅನಿವಾರ್ಯ ಎನ್ನಬಹುದು.

ಜಾಗತಿಕ ಮಟ್ಟದಲ್ಲಿ ರಾಜಕೀಯ, ಭೌಗೋಳಿಕ ಸಮಸ್ಯೆಗಳಿಂದ ಇಂದು ಆರ್ಥಿಕ ಹಿನ್ನಡೆ ಕಾಲಿಟ್ಟಿದೆ. ನಮ್ಮ ವಿದೇಶ ವ್ಯಾಪಾರ ಕುಗ್ಗಿದೆ, ಇದ್ದುದರಲ್ಲೇ ಭಾರತದ ಸ್ಥಿತಿ ಉತ್ತಮವಾಗಿದ್ದು ಚೀನಾ ದೇಶಕ್ಕೆ ಪರ್ಯಾಯ ‘ಜಗತ್ತಿನ ಫ್ಯಾಕ್ಟರಿ’ಯಾಗುವ ಸಾಮರ್ಥ್ಯ ಭಾರತಕ್ಕಿದೆ ಎಂದು ತಜ್ಞರು ಅಭಿಪ್ರಾಯಪಡುತ್ತಿದ್ದಾರೆ. ಅದಕ್ಕಾಗಿ ಸಾಕಷ್ಟು ಶ್ರಮಿಸಬೇಕು. ಇವೆಲ್ಲಕ್ಕೂಅರ್ಥಮಂತ್ರಿಗಳು ಉತ್ತರವನ್ನು ಬಜೆಟ್‌ ನಲ್ಲಿ ಕೊಡಬೇಕಾಗಿದೆ.

ಬಜೆಟ್ ದಿನ (ಫೆ.1) ಮಂಡನೆಗೆ ಒಂದು ಗಂಟೆ ಮೊದಲು ವಿತ್ತ ಸಚಿವರು ತಮ್ಮ ಬಜೆಟ್ ಪ್ರತಿಯೊಡನೆ ಪ್ರಧಾನ ಮಂತ್ರಿಗಳನ್ನುಭೇಟಿಯಾಗುತ್ತಾರೆ. ಇಬ್ಬರೇ ಇದ್ದಾಗ ಸಂಕ್ಷಿಪ್ತ ವಿವರಗಳನ್ನು ತಿಳಿಸಿ ಒಪ್ಪಿಗೆ ಪಡೆಯುತ್ತಾರೆ. ಯಾರೊಡನೆಯೂ ಮಾತನಾಡದೆ ಇಬ್ಬರೂ ಕೂಡಿ ನೇರವಾಗಿ ಸಂಸತ್ಭವನಕ್ಕೆ ಬರುತ್ತಾರೆ. ಅಲ್ಲಿ ರಾಜರಿದ್ದ ಸಚಿವರೊಡನೆ ಸಂಪುಟ ಸಭೆ ನಡೆದು ಒಪ್ಪಿಗೆ ಪಡೆಯಲಾಗುತ್ತದೆ. ಅಲ್ಲಿಂದ ಎಲ್ಲರೂ ಬಾಯಿ ಮುಚ್ಚಿಕೊಂಡು ನೇರವಾಗಿ ಲೋಕಸಭೆಗೆ ಹಾಜರಾಗುತ್ತಾರೆ. ಸ್ಪೀಕರ್ ಅವರ ಅನುಮತಿ ಪಡೆದು ಸಮಯಕ್ಕೆ ಸರಿಯಾಗಿ ಬಜೆಟ್‌ ಭಾಷಣ ಆರಂಭವಾಗುತ್ತಿವೆ. ಅಷ್ಟರಲ್ಲಿ ಕ್ಯೂರಿಟಿಪ್ರೆಸ್‌ಸಿನಿಂದ ಬಜೆಟ್ ಪ್ರತಿಗಳು ಭದ್ರತೆಯೊಡನೆ ಸಂಸತ್ಭವನಕ್ಕೆಬಂದಿರುತ್ತವೆ. ಲೋಕಸಭೆಯಲ್ಲಿ ಭಾಷಣ ಆರಂಭವಾದೊಡನೆ ಮೊದಲು ಸದಸ್ಯರಿಗೆ, ನಂತರ ಮಾಧ್ಯಮದವರಿಗೆ ಹಾಗೂ ಐದು ನಿಮಿಷ ಅಂತರದಲ್ಲಿ ರಾಜ್ಯಸಭೆ ಸದಸ್ಯರಿಗೆ ಹಣಕಾಸು ಸಹಾಯಕ ಸಚಿವರನಿರ್ದೇಶನದಂತೆ ಪ್ರತಿಗಳನ್ನು ವಿತರಿಸಲಾಗುತ್ತದೆ. ಭಾಷಣ ಮುಗಿಯುವವರೆಗೆ ಯಾರೂ ಹೊರಗೆ ಹೋಗುವಂತಿಲ್ಲ. ಈಗ ಟಿವಿ ಮಾಧ್ಯಮದಲ್ಲಿ ನೇರ ಪ್ರಸಾರವಾಗುತ್ತಿರುವುದರಿಂದ ಓದುತ್ತಾ ಹೋದಂತೆ ಅದು ಸಾರ್ವಜನಿಕ ದಾಖಲೆಯಾಗುತ್ತದೆ. ಬಜೆಟ್ ಗಾತ್ರ ಮತ್ತು ಸಾಲದ ಅಂದಾಜು

ಹಾಲಿ ವರ್ಷದ (2022-23) ಬಜೆಟ್ ಗಾತ್ರ 39,44,909 ಕೋಟಿ ರೂ. ಗಳಾಗಿದ್ದು, ಬಂಡವಾಳ ಖಾತೆ ವೆಚ್ಚ 7,50,246 ಕೋಟಿ ರೂ. ಗಳಷ್ಟಾಗಿತ್ತು. ರಾಜ್ಯಗಳಿಗೆ ಆಸ್ತಿ ನಿರ್ಮಾಣಕ್ಕಾಗಿ ಒದಗಿಸಿದಅನುದಾನವೂ ಸೇರಿದರೆ ರೂ.10 ಲಕ್ಷ ಕೋಟಿಗೂ ಹೆಚ್ಚಾಗಬಹುದು. ಆದರೆ ಅದು ಕೇಂದ್ರ ಹೂಡಿಕೆಗಳಲ್ಲಿ ಸೇರುವುದಿಲ್ಲ. ಆದ್ದರಿಂದ ಕೇಂದ್ರ ಬಂಡವಾಳ ವೆಚ್ಚದಲ್ಲಿ 6.5 ಲಕ್ಷ ಕೋಟಿ ರೂ. ಗಳನ್ನು ಹೊಸ ಹೂಡಿಕೆಗಳಾಗಿಯೂ, ಉಳಿದದ್ದನ್ನು ಮುಂದುವರಿದ ಯೋಜನೆಗಳಿಗಾಗಿವೆಚ್ಚವೆಂದೂಅಂದಾಜಿಸಲಾಗಿತ್ತು. ಹೊಸ ಸಾಲ ಮತ್ತು ಹೊಣೆಗಾರಿಕೆಗಳಿಗೆ (ಕೋಶೀಯಕೊರತೆಗೆ) ಬಂದರೆ ಅದು 1,66,1196 ಕೋಟಿ ರೂ. ಗಳಾಗಿದ್ದು, ಇದರಲ್ಲಿ ಸಣ್ಣ ಉಳಿತಾಯಗಳ ಕೇಂದ್ರದ ಪಾಲೂ ಸೇರಿದೆ. ಇದು ರಾಷ್ಟ್ರೀಯ ಆದಾಯದ (ಜಿಡಿಪಿ) ಶೇ.6.4ರಷ್ಟು ಆಗುತ್ತದೆ. ಬಜೆಟ್ ತಯಾರಿಕೆಗಾಗಿ ರಾಷ್ಟ್ರೀಯ ಆದಾಯವನ್ನು ಇಂದಿನ ಬೆಲೆಗಳಲ್ಲಿ ಹಣದುಬ್ಬರವನ್ನು ಪರಿಗಣಿಸದೇ ಲೆಕ್ಕ ಹಾಕಲಾಗುತ್ತದೆ. ಇದನ್ನು ನಾಮಮಾತ್ರ ರಾಷ್ಟ್ರೀಯ ಒಟ್ಟಾದಾಯವೆಂದು (nominal gross domestic product) ಕರೆಯಲಾಗುವುದು. ಈ ವರ್ಷಕ್ಕಾಗಿ ಹಿಂದಿನ ಬಜೆಟ್‌ನಲ್ಲಿ ಜಿಡಿಪಿಯನ್ನು ಹಿಂದಿನ ವರ್ಷದ ಜಿಡಿಪಿಯ ಶೇ.11.1ರಷ್ಟು ಹೆಚ್ಚು ಎಂದು ಲೆಕ್ಕ ಹಾಕಲಾಗಿತ್ತು.

See also  ಕನ್ನಡೇತರರು ʼಕನ್ನಡʼ ಕಲಿಯಲು ಸರ್ಕಾರಿ ವೆಬ್ ಸೈಟ್ ಆರಂಭ

ಇವೆಲ್ಲವುಗಳ ಆಧಾರದಲ್ಲಿ ತಜ್ಞರ ಅಭಿಪ್ರಾಯದಂತೆ 2023-24ರ ಬಜೆಟ್ ವೆಚ್ಚಗಳ ಗಾತ್ರ ರೂ.42.00 ಲಕ್ಷ ಕೋಟಿಯಿಂದ ರೂ.42.5 ಲಕ್ಷ ಕೋಟಿಯ ಆಸುಪಾಸಿನಲ್ಲಿರಬಹುದು. ಇದರಲ್ಲಿ ಹೊಸ ಬಂಡವಾಳ ಹೂಡಿಕೆಗಳಿಗಾಗಿಯೇ ಸುಮಾರು ರೂ.7.5 ಲಕ್ಷ ಕೋಟಿಯಿಂದ ರೂ.8.5 ಲಕ್ಷ ಕೋಟಿ ಇರುವ ಸಾಧ್ಯತೆ ಇದೆ. ಗತಿಶಕ್ತಿ ಮುಂತಾದ ಮೂಲ ಸೌಲಭ್ಯಗಳ ಯೋಜನೆಗಳಿಗೆ ಹೆಚ್ಚು ಒತ್ತು ಕೊಟ್ಟಿರುವುದರಿಂದ ಮತ್ತು ಉದ್ಯೋಗಾವಕಾಶಗಳನ್ನುಹೆಚ್ಚಿಸಬೇಕಾಗಿರುವುದರಿಂದ ಈ ಮೊತ್ತದ ಅಂದಾಜು ಅವಶ್ಯವೆನಿಸುತ್ತದೆ. ಕೋಶೀಯ ಕೊರತೆ ಜಿಡಿಪಿಯ ಶೇ.5.8 ರಿಂದ ಶೇ.6.0ರ ಒಳಗೆ ಇರುವ ಲಕ್ಷಣಗಳಿವೆ.

ಜಾಗತಿಕ ಆರ್ಥಿಕ ಹಿನ್ನಡೆ, ಚೀನಾದಲ್ಲಿ ಮುಂದುವರಿದ ಸಮಸ್ಯೆಗಳು ಮತ್ತು ರಷ್ಯಾ – ಉಕ್ರೇನ್ ಯುದ್ಧದ ಪರಿಣಾಮವಾಗಿ ನಮ್ಮ ಅರ್ಥ ವ್ಯವಸ್ಥೆ ನಿರೀಕ್ಷಿಸಿದಷ್ಟು ಬೆಳೆಯದೇ ಇರುವುದರಿಂದನಮ್ಮ ಜಿಡಿಪಿಯನ್ನು2023-24ರಲ್ಲಿ ಹಾಲಿ ವರ್ಷದ ಪರಿಷ್ಕೃತ ಅಂದಾಜಿಗಿಂತ ಶೇ.9.0 ರಿಂದ ಶೇ.9.5 ಹೆಚ್ಚು ಅಂದಾಜು ಮಾಡಬಹುದೆಂದು ಹಲವು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಬಜೆಟ್‌ನಲ್ಲಿ ಕೋಶೀಯಕೊರತೆಯ ಮೊತ್ತ ಗಣನೀಯವಾಗಿ ಹೆಚ್ಚುವ ಸಾಧ್ಯತೆ ಇಲ್ಲದಿರುವುದಕ್ಕೆ ಇದೂ ಒಂದು ಕಾರಣ. ಈ ವರ್ಷ ಈವರೆಗಿನ ಅಂಕಿ ಅಂಶಗಳಂತೆ ನೇರ ತೆರಿಗೆಗಳು ಮತ್ತು ಜಿಎಸ್‌ ಟಿ ಸಂಗ್ರಹ ದೊಡ್ಡ ಪ್ರಮಾಣದಲ್ಲಿ ಹೆಚ್ಚಾಗುತ್ತಿರುವುದರಿಂದ ಇದೇ ಗತಿಯಲ್ಲಿ ಮುಂದಿನ ವರ್ಷದಲ್ಲಿ ತೆರಿಗೆ ಸಂಗ್ರಹ ಹೆಚ್ಚುವ ನಿರೀಕ್ಷೆಯಲ್ಲಿ ಸರ್ಕಾರ ಇದ್ದು, ಬಜೆಟ್ ಕೊರತೆ ಕಡಿಮೆಯಾಗುವ ಆಶಾಭಾವನೆ ಹೊಂದಿರುವ ಸಾಧ್ಯತೆಯೂ ಇದೆ.

ಕೆಲವು ಸಾಧ್ಯತೆಗಳು
ಆದಾಯ ತೆರಿಗೆ ವಿಷಯದಲ್ಲಿ ತೆರಿಗೆ ಲೆಕ್ಕ ಹಾಕುವ ಹಳೆಯ ವಿಧಾನವನ್ನು ರದ್ದು ಮಾಡಿ, ಹೊಸ ವಿಧಾನದಲ್ಲಿ ಅಲ್ಪಸ್ವಲ್ಪ ಬದಲಾವಣೆಗಳನ್ನು ತರಬಹುದು. ಹೊಸ ವಿಧಾನ ಒಂದನ್ನೇ ಉಳಿಸಿಕೊಂಡಾಗ ತೆರಿಗೆ ದರಗಳು ಹೆಚ್ಚಾಗಿದ್ದುದನ್ನು ಕಡಿಮೆ ಮಾಡುವ ಉದ್ದೇಶದಿಂದ ತೆರಿಗೆ ವಿನಾಯಿತಿಯನ್ನು ರೂ. 5 ಲಕ್ಷಕ್ಕೆ ಹೆಚ್ಚಿಸಿ ರೂ.10 ಲಕ್ಷದ ವರೆಗೆ ಶೇ.10ರಷ್ಟು ತೆರಿಗೆ, ರೂ.10 ಲಕ್ಷದಿಂದ ರೂ.20 ಲಕ್ಷದ ವರೆಗೆ ಶೇ. 20ರಷ್ಟು ತೆರಿಗೆ ಮತ್ತು ರೂ. 20 ಲಕ್ಷಕ್ಕೂ ಮೇಲ್ಪಟ್ಟ ಆದಾಯಕ್ಕೆ ಶೇ.30ರಷ್ಟು ತೆರಿಗೆ ನಿಗದಿ ಮಾಡಬಹುದು. ಹೇಗೋ ಈಗ ರೂ.5 ಲಕ್ಷದವರೆಗೆ ಆದಾಯ ಇರುವವರು ತೆರಿಗೆ ಪಾವತಿಸಬೇಕಿಲ್ಲ. ಸಣ್ಣ ಆದಾಯದವರಿಗೆ ಸ್ವಲ್ಪ ರಿಯಾಯಿತಿ ಸಿಗಬಹುದು. ಹಳೆಯ ವಿಧಾನವನ್ನು ಉಳಿಸಿಕೊಂಡರೆ ಸ್ಟ್ಯಾಂಡರ್ಡ್ಡಿಡಕ್ಷನ್ (ಸಂಬಳದಾರರಿಗೆ) ಮೊತ್ತವನ್ನು ರೂ.75,000ಕ್ಕೆ ಹೆಚ್ಚಿಸಬಹುದು. ಅದೇ ರೀತಿ 80c ಕಾಲಮಿನ ಅನ್ವಯ ಉಳಿತಾಯಗಳಮಿತಿಗಳನ್ನು ಎರಡು ಲಕ್ಷ ರೂಪಾಯಿಗಳಿಗಾದರೂ ಹೆಚ್ಚಿಸಬಹುದು. ಹಲವು ವರ್ಷಗಳಿಂದ ಇವುಗಳು ಬದಲಾಗಿಲ್ಲ. ಹಣದುಬ್ಬರ ಪರಿಣಾಮವನ್ನು ಗಮನಿಸಬೇಕು.

ಸ್ಥಳೀಯ ಕೈಗಾರಿಕಾ ಉತ್ಪಾದನೆ ಹೆಚ್ಚಿಸಲು ಉತ್ಪಾದನೆ ಆಧಾರಿತ ಉತ್ತೇಜಕಗಳು (ಪಿಎಲ್‌ಐ) ಯೋಜನೆಗೆ ಬಜೆಟ್‌ನಲ್ಲಿ ಹೆಚ್ಚು ಮೊತ್ತವನ್ನು ಒದಗಿಸಬಹುದು ಮತ್ತು ಇನ್ನೂ ಕೆಲವು ಕೈಗಾರಿಕೆಗಳಿಗೆ ಸಣ್ಣ ಬದಲಾವಣೆಗಳೊಂದಿಗೆ ವಿಸ್ತರಿಸಬಹುದು. ಕೈಗಾರಿಕೆ ಉತ್ಪಾದನೆಗೆ ಅವಶ್ಯವಿರುವ ಕೆಲವು ಕಚ್ಚಾ ಸರಕುಗಳು ಮತ್ತು ಮಧ್ಯಂತರ ಸರಕುಗಳ ಆಯಾತಗಳ ಮೇಲಿನ ಕಸ್ಟಮ್ಸ್ಸುಂಕಗಳನ್ನು ಕಡಿಮೆ ಮಾಡಬಹುದು ಅಥವಾ ತೆಗೆದು ಹಾಕಬಹುದು. ವಿದ್ಯುತ್ ವಾಹನ ಉತ್ಪಾದನೆಗೆ ಹೆಚ್ಚು ಪ್ರೋತ್ಸಾಹಗಳನ್ನುಪ್ರಕಟಿಸಬಹುದು. ಹಿಂದೆ ಪ್ರಕಟಿಸಿದ್ದ ಬ್ಯಾಟರಿ ವಿನಿಮಯ ವ್ಯವಸ್ಥೆ ವಿಸ್ತರಣೆಗೆ ಉತ್ತೇಜಕಗಳನ್ನು ಪ್ರಕಟಿಸಬಹುದು.

See also  75ನೇ ವರ್ಷದ ಸ್ವಾತಂತ್ರೋತ್ಸವದ ಸಂಭ್ರಮಕ್ಕೆ ಮೆರಗು ನೀಡಲು ‘ಹರ್ ಘರ್ ತಿರಂಗ’ ಹಾಡು ಬಿಡುಗಡೆ

ನವೀಕರಿಸಬಹುದಾದ ಶಕ್ತಿ ಮೂಲಗಳ ಅಭಿವೃದ್ಧಿಗೆ ಒತ್ತು ಕೊಡಬಹುದು. ಶಿಕ್ಷಣ ಮತ್ತು ಆರೋಗ್ಯ ಇಲಾಖೆಗಳಿಗೆ ಹೆಚ್ಚು ಸಂಪನ್ಮೂಲ ಒದಗಿಸುವ ಸಾಧ್ಯತೆ ಇದೆ. ಡಿಜಿಟಲೈಜೇಷನ್ ಮತ್ತು ಕೌಶಲಾಭಿವೃದ್ಧಿಗೆ ಹೆಚ್ಚಿನ ಯೋಜನೆಗಳನ್ನು ಪ್ರಕಟಿಸಬಹುದು. ಸಂಶೋಧನೆಗೆ ಹೆಚ್ಚು ಆದ್ಯತೆ ನೀಡಿ ಹಣ ಒದಗಿಸಬಹುದು.

-ಮಣಿಕಂಠತ್ರಿಶಂಕರ್, ಮೈಸೂರು

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

34905
ಮಣಿಕಂಠ ತ್ರಿಶಂಕರ್

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು