ಬೆಂಗಳೂರು: ಕೃತಕ ಬುದ್ಧಿಮತ್ತೆ ಆಧರಿತ ಮಾರುಕಟ್ಟೆ ಇಂಟಿಗ್ರೇಟೆಡ್ ಮಾರ್ಕೆಟ್ ರಿಸರ್ಚ್ ಪ್ಲಾಟ್‌ಫಾರ್ಮ್ ಸಂಸ್ಥೆ ಎಂಟ್ರೊಪಿಕ್ ಬೆಸ್ಸೆಮರ್ ವೆಂಚರ್ ಪಾರ್ಟ್‌ನರ್ಸ್ ಮತ್ತು ಎಸ್ ಐಜಿ ವೆಂಚರ್ ಕ್ಯಾಪಿಟಲ್ ನೇತೃತ್ವ ಮೂಲಕ ಬಿ ಸರಣಿಯಲ್ಲಿ $ 25 ಮಿಲಿಯನ್ ನಿಧಿ ಸಂಗ್ರಹಿಸಿದೆ ಎಂದು ತಿಳಿಸಿದೆ.
ಎಂಟ್ರೊಪಿಕ್ ಕಳೆದ ಎರಡು ವರ್ಷಗಳಲ್ಲಿ ಏಳು ಪಟ್ಟು ಬೆಳೆದ್ದು, ಯುಎಸ್, ಯುರೋಪ್, ಆಗ್ನೇಯ ಏಷ್ಯಾ ಮತ್ತು ಮಧ್ಯಪ್ರಾಚ್ಯಕ್ಕೆ ವ್ಯವಹಾರ ವಿಸ್ತರಣೆಯಾಗಿದೆ.
ಹಣಕಾಸು, ಮಾಧ್ಯಮ, ಗ್ರಾಹಕ ಸರಕುಗಳು, ಆಹಾರ ಮತ್ತು ಪಾನೀಯ ಮತ್ತು ಮನರಂಜನೆಯಾದ್ಯಂತ 150 ಕ್ಕೂ ಹೆಚ್ಚು ಜಾಗತಿಕ ಬ್ರ್ಯಾಂಡ್‌ಗಳು ಉತ್ತಮ ಗ್ರಾಹಕ-ಕೇಂದ್ರಿತ ಆಧರಿತ ವಿಷಯಗಳ ಬಗ್ಗೆ ಸಂಸ್ಥೆ ಗಮನಹರಿಸಿದೆ ಎಂದು ಎಂಟ್ರೋಪಿಕ್‌ನ ಸಂಸ್ಥಾಪಕ ಮತ್ತು ಸಿಇಒ ರಂಜನ್ ಕುಮಾರ್ ಹೇಳಿದ್ದಾರೆ.
ನಮ್ಮ ಜಾಗತಿಕ ತಂಡ ಮತ್ತು ನಂಬಿಕೆಯ ಕಠಿಣ ಪರಿಶ್ರಮಕ್ಕೆ ಸಾಕ್ಷಿಯಾಗಿದೆ. ನಮ್ಮ ತಂಡವು ಗ್ರಾಹಕರ ಸಂಶೋಧನಾ ವಿಭಾಗದಲ್ಲಿಸಂಶೋಧನೆಗೆ ಉತ್ಸುಕವಾಗಿದೆ ಎಂದು ಬೆಸ್ಸಮರ್ ವೆಂಚರ್ ಪಾಲುದಾರ ಅನಂತ್ ಪುರಿ ಹೇಳಿದರು.
ಬೆಂಗಳೂರಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಕಂಪನಿಯು ಯುಎಸ್, ಕೆನಡಾ, ಯುರೋಪ್, ಮಧ್ಯಪ್ರಾಚ್ಯ ಮತ್ತು ಏಷ್ಯಾದಾದ್ಯಂತ ವ್ಯಾಪಾರ ಅಸ್ತಿತ್ವವನ್ನು ಹೊಂದಿದೆ.