ನ್ಯೂಯಾರ್ಕ್: ಕೆನಡಾದಿಂದ ಅಮೆರಿಕಕ್ಕೆ ಅಕ್ರಮವಾಗಿ ತೆರಳಲು ನದಿಯನ್ನು ದಾಟುತ್ತಿದ್ದ ಮುಳುಗಿ ಸತ್ತವರಲ್ಲಿ ಭಾರತೀಯರು ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕ್ವಿಬೆಕ್‌ನ ಸ್ಥಳೀಯ ಕೆನಡಾದ ಮೀಸಲು ಪ್ರದೇಶದ ಸೇಂಟ್ ಲಾರೆನ್ಸ್ ನದಿಯ ಬಳಿಯ ಜವುಗು ಪ್ರದೇಶದಲ್ಲಿ ಪತ್ತೆಯಾದ ಎಂಟು ಜನರಲ್ಲಿ ಭಾರತದ ಪ್ರಜೆಗಳು ಸೇರಿದ್ದಾರೆ. ಅವರು “ಕೆನಡಾದಿಂದ ಯುಎಸ್‌ಗೆ ಅಕ್ರಮ ಪ್ರವೇಶ ಮಾಡಲು ಯತ್ನಿಸುವ ವೇಳೆ ಈ ದುರಂತ ಸಂಭವಿಸಿದೆ ಎಂದು ಸ್ಥಳೀಯ ಪೋಲೀಸ್‌ನ ಉಪ ಮುಖ್ಯಸ್ಥ ಲೀ-ಆನ್ ಒ’ಬ್ರೇನ್ ಶುಕ್ರವಾರ ಹೇಳಿದರು.
ಗುರುವಾರ ವಾಯು ಶೋಧದ ವೇಳೆ ಆರು ಶವಗಳು ಪತ್ತೆಯಾಗಿವೆ ಎಂದು ಅವರು ಹೇಳಿದರು. ಶುಕ್ರವಾರ ಮತ್ತೆರಡು ಶವಗಳು ಪತ್ತೆಯಾಗಿವೆ ಎಂದು ಅಕ್ವೆಸಾಸ್ನೆ ಮೊಹಾಕ್ ಪೊಲೀಸ್ ಸೇವೆ ವರದಿ ಮಾಡಿದೆ.
ಒಂದು ಭಾರತೀಯ ಪ್ರಜೆ ಎಂದು ನಂಬಲಾದ ಮಹಿಳೆಯದ್ದು ಮತ್ತು ಇನ್ನೊಂದು ಕೆನಡಾದ ಪಾಸ್‌ಪೋರ್ಟ್ ಹೊಂದಿರುವ ರೊಮೇನಿಯನ್ ಮೂಲದ ಶಿಶುವಿನದ್ದಾಗಿದೆ ಎಂದು ವರದಿ ಹೇಳಿದೆ