News Karnataka Kannada
Saturday, April 27 2024
ಸಂಪಾದಕರ ಆಯ್ಕೆ

ತುಂಬೆ ಡ್ಯಾಂನಲ್ಲಿ 20 ದಿನಕ್ಕಾಗುವಷ್ಟು ನೀರು, ಮಂಗಳೂರು ನಗರಕ್ಕೆ 2019ರ ಜಲಕ್ಷಾಮ ಸಾಧ್ಯತೆ

Mangaluru city likely to face 2019 water scarcity as thumbay dam gets 20 days of water supply
Photo Credit : News Kannada

ಮಂಗಳೂರು: ತುಂಬೆ ಡ್ಯಾಂನಲ್ಲಿ ಮಂಗಳೂರು ನಗರಕ್ಕೆ ಕೇವಲ 20 ದಿನಕ್ಕೆ ಪೂರೈಕೆ ಮಾಡುವಷ್ಟು ನೀರಿನ ಸಂಗ್ರಹವಿದ್ದು, ಪ್ರಸ್ತುತ ನೀರು ಪಂಪಿಂಗ್‌ ಮಾಡದೇ ಇದ್ದರೂ ಕೂಡ ಪ್ರತಿದಿನ 4 ಸೆಂಟಿಮೀಟರ್‌ನಷ್ಟು ಇಳಿಕೆಯಾಗುತ್ತಿದೆ. ತುಂಬೆಯಿಂದ ಪ್ರತಿದಿನ ಪಂಪಿಂಗ್‌ ಮಾಡುತ್ತಿರುವ ವೇಳೆ 8 ಸಂಟಿಮೀಟರ್‌ನಷ್ಟು ನೀರು ಇಳಿಕೆಯಾಗುತ್ತಿತ್ತು. ಆದರೀಗ ಪಂಪಿಂಗ್‌ ಮಾಡದೇ 4 ಸೆಂಟಿಮೀಟರ್‌ ಇಳಿಕೆಯಾಗುತ್ತಿರುವುದು ನೀರಿನ ಆವಿಯ ಪ್ರಮಾಣವನ್ನು ತಿಳಿಸುವಂತಿದೆ.

ಒಳಹರಿವು ಇಲ್ಲ: ಮಳೆಯಾಗದಿರುವ ಹಿನ್ನಲೆಯಲ್ಲಿ ತುಂಬೆ ಅಣೆಕಟ್ಟಿಗೆ ನೀರಿನ ಒಳಹರಿವು ಇಲ್ಲ. ನೀರಿನ ಮಟ್ಟ ಕುಸಿಯುತ್ತಿರುವ ಹಿನ್ನಲೆಯಲ್ಲಿ ರೇಶನಿಂಗ್‌ ಅನಿವಾರ್ಯವಾಗಬಹುದು. ಅದರ ಸ್ವರೂಪ ಹೇಗಿರಲಿದೆ ಎಂಬ ಬಗ್ಗೆ ಜಿಲ್ಲಾಧಿಕಾರಿ ಸಭೆ ನಡೆಸಲಿದ್ದಾರೆ ಎಂದು ಮನಪಾ ಆಯುಕ್ತ ಚೆನ್ನಬಸಪ್ಪ ತಿಳಿಸಿದ್ದಾರೆ.

ಮತ್ತೊಂದೆಡೆ ಸುಬ್ರಹ್ಮಣ್ಯ ಕಡಬ ಭಾಗದಲ್ಲಿ ಮಳೆಯಾಗಿದ್ದರೂ ನೀರಿನ ಒರತೆ ಹುಟ್ಟದ ಕಾರಣ ನದಿಗಳು ಇನ್ನು ಜೀವಂತಿಕೆ ಪಡೆದಿಲ್ಲ. ಅದರಿಂದ ಡ್ಯಾಂಗಳಿಗೆ ಸೇರುವ ನೀರಿನ ಪ್ರಮಾಣವು ಅತಿಕಡಿಮೆ ಸ್ಥಿತಿಯಲ್ಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು