News Kannada
Tuesday, September 26 2023
ಸಂಪಾದಕರ ಆಯ್ಕೆ

ಇಂದು ವಿಶ್ವ ಪರಿಸರ ದಿನ: ಶುದ್ಧ ಗಾಳಿ ಉಸಿರಾಟಕ್ಕೆ ಮನೆಯಲ್ಲಿರಲಿ ಗಿಡಗಳು

Today is World Environment Day: Plants at home to breathe clean air
Photo Credit : Pixabay

ವಾಹನಗಳು ಉಗುಳುತ್ತಿರುವ ದಟ್ಟ ಹೊಗೆ ಕಲುಷಿತ ಗಾಳಿಯಿಂದಾಗಿ ವಾಯುಮಾಲಿನ್ಯ ಹೆಚ್ಚಳವಾಗಿದೆ. ಜನರ ಉಸಿರಾಟಕ್ಕೆ ತೊಂದರೆಯಾಗಿದೆ. ಮನೆಯ ಹೊರಗೆ ಮಾತ್ರವಲ್ಲ, ಮನೆಯ ಒಳಗಡೆನೂ ಕೂಡ ಶುದ್ಧಗಾಳಿ ಲಭ್ಯವಾಗುತ್ತಿಲ್ಲ. ಇಷ್ಟು ದಿನ ಹಳ್ಳಿಗಳು ಹಚ್ಚ ಹಸಿರಾಗಿತ್ತು. ಆದ್ರೀಗ ಅಭಿವೃದ್ಧಿ ಹೆಸರಿನಲ್ಲಿ ಹಳ್ಳಿಗಳಲ್ಲೂ ಹಸಿರು ಮಂಗಮಾಯವಾಗಿದೆ.

ನೀವು ಮನೆಯಲ್ಲೇ ಶುದ್ಧ ಗಾಳಿಯನ್ನು ಪಡೆದುಕೊಳ್ಳಬಹುದು. ಅದು ಹೇಗಂದ್ರೆ ಮನೆಯಲ್ಲಿ ಈ ಗಿಡಗಳನ್ನು ಬೆಳೆಸಿದ್ರೆ ಸಾಕು. ಮನೆಯವರೆಲ್ಲರೂ ಶುದ್ಧಗಾಳಿಯನ್ನು ಸೇವಿಸ್ಬಹುದು. ಈ ಗಿಡಗಳು ಅಶುದ್ಧ ಗಾಳಿಯನ್ನು ಶುದ್ಧಗೊಳಿಸುವ ಶಕ್ತಿಯನ್ನು ಹೊಂದಿದೆ.ನೀವು ಉಸಿರಾಡುವ ಗಾಳಿ ಆರೋಗ್ಯಕರವಾಗಿರಬೇಕೆಂದರೆ ಈ ಗಿಡಗಳನ್ನು ಮನೆಯಲ್ಲಿಯೇ ಬೆಳೆಯಿರಿ.

ಮನಿ ಪ್ಲಾಂಟ್: ಮನೆಯೊಳಗಡೆ ಗಾಳಿಯನ್ನು ಶುದ್ಧೀಕರಿಸಲು ಮನಿ ಪ್ಲಾನ್ ಉತ್ತಮ ಸಸ್ಯ. ಈ ಸಸ್ಯದ ಜನಪ್ರಿಯತೆಗೆ ಪ್ರಮುಖ ಕಾರಣವೆಂದರೆ ಅದರ ಹೆಸರು. ಎರಡನೇಯದ್ದು ಇದರ ನಿರ್ವಹಣೆ ತುಂಬಾನೇ ಸುಲಭ. ಎಲ್ಲಿದ್ರೂ ಕೂಡ ಕೂಡ ಮನಿ ಪ್ಲಾಂಟ್ ಬದುಕುತ್ತದೆ.

ಅರೆಕಾ ಪಾಮ್ : ಗಾಳಿಯನ್ನು ಶುದ್ಧೀಕರಿಸುವ ಸಸ್ಯವಾಗಿ ಇತ್ತೀಚಿನ ದಿನಗಳಲ್ಲಿ ಜನಪ್ರಿಯತೆಯನ್ನು ಗಳಿಸಿದೆ. ಈ ಸಸ್ಯವು ನೋಡಲು ಸುಂದರವಾಗಿದ್ದು, ಉದ್ದವಾದ ಮತ್ತು ಸೊಂಪಾದ ಹಸಿರು ಎಲೆಗಳನ್ನು ಹೊಂದಿದೆ. ಮತ್ತು ಇದರ ಎಲೆಗಳು ದಟ್ಟವಾಗಿದೆ. ನೋಡಲು ಕೊಂಚ ತಾಳೆಗಿಡದಂತೆ ಇದ್ದು, ಸ್ವಲ್ಪ ಉದ್ದವಾಗಿ ಬೆಳೆಯುತ್ತದೆ.

ರಬ್ಬರ್ ಸಸ್ಯ :ನೋಡೋದಕ್ಕೆ ಕಪ್ಪು-ನೇರಳೆ ಬಣ್ಣದಲ್ಲಿದೆ. ಇದು ನೋಡೋದಕ್ಕೆ ತುಂಬಾನೇ ಸುಂದರವಾಗಿ ಕಾಣುತ್ತದೆ. ಗಾಳಿಯನ್ನು ಶುದ್ಧೀಕರಿಸೋದ್ರಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

See also  ವಿಜಯಪುರ: ಮೂರು ದಿನಗಳಲ್ಲಿ ನಾಲ್ಕು ಸಣ್ಣ ಭೂಕಂಪಗಳು, ಜಿಲ್ಲೆಯಲ್ಲಿ ಯಾವುದೇ ಹಾನಿ ವರದಿಯಾಗಿಲ್ಲ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು