News Kannada
Saturday, February 24 2024
ಕ್ರೀಡೆ

ಟೀಂ ಇಂಡಿಯಾದ ನಾಯಕತ್ವ ಪಟ್ಟ ಕೊಹ್ಲಿಗೆ ಸೂಕ್ತ: ರವಿಶಾಸ್ತ್ರಿ

Photo Credit :

ಟೀಂ ಇಂಡಿಯಾದ ನಾಯಕತ್ವ ಪಟ್ಟ ಕೊಹ್ಲಿಗೆ ಸೂಕ್ತ: ರವಿಶಾಸ್ತ್ರಿ

ಹೊಸದಿಲ್ಲಿ: ಕ್ರಿಕೆಟ್ ತಂಡದ ಭವಿಷ್ಯತ್ತಿನ ದೃಷ್ಟಿಯಿಂದ ಟೆಸ್ಟ್ ಕ್ರಿಕೆಟ್ ನಾಯಕರಾಗಿರುವ ವಿರಾಟ್​ ಕೊಹ್ಲಿಗೆ ಟಿ20 ಹಾಗೂ ಏಕದಿನ ತಂಡದ ನಾಯಕತ್ವ ನೀಡುವುದು ಸೂಕ್ತವಾಗಿದೆ ಎಂದು ಟೀಂ ಇಂಡಿಯಾ ಮಾಜಿ ನಿರ್ದೇಶಕ ರವಿಶಾಸ್ತ್ರಿ ತಿಳಿಸಿದರು.

ಪ್ರಸ್ತುತ ವಿರಾಟ್ ಕೊಹ್ಲಿಗೆ ಮೂರು ಮಾದರಿಯ ಕ್ರಿಕೆಟ್ ತಂಡದ ನಾಯಕತ್ವ ನೀಡಲು ಸರಿಯಾದ ಸಮಯ. 2019ರ ಏಕದಿನ  ವಿಶ್ವಕಪ್​ಗೆ ಭದ್ರವಾದ ತಂಡ ಕಟ್ಟುವ ಅಗತ್ಯತೆ ಇದ್ದು, ಅದಕ್ಕೆ ಪೂರ್ವಭಾವಿಯಾಗಿ ಈಗಿನಿಂದಲೇ ತಂಡದಲ್ಲಿ ಬದಲಾವಣೆ ಅಗತ್ಯವಾಗಿದೆ. ವಿರಾಟ್​ ಕೊಹ್ಲಿಗೆ ಮೂರು ಮಾದರಿಗಳಲ್ಲಿ  ನಾಯಕನ ಜವಬ್ದಾರಿ ನೀಡುವುದು ಸೂಕ್ತ ಎಂದು ಶಾಸ್ತ್ರಿ ಅಭಿಪ್ರಾಯ ಪಟ್ಟಿದ್ದಾರೆ.

ಪ್ರಸ್ತುತ ಟಿ20 ಹಾಗೂ ಏಕದಿನ ತಂಡದ ನಾಯಕರಾಗಿರುವ ಮಹೇಂದ್ರ ಸಿಂಗ್ ಧೋನಿ ತಂಡದ ಆಟಗಾರರಾಗಿ ಮುಂದುವರೆಯಬೇಕು. ಟೀಂ ಇಂಡಿಯಾಕ್ಕೆ ಧೋನಿ ಕೊಡುಗೆ  ಅಪಾರವಾಗಿದ್ದು, ಅವರು ತಮ್ಮ ಬ್ಯಾಟಿಂಗ್ ಬಗ್ಗೆ ಹೆಚ್ಚು ಗಮನ ನೀಡಬೇಕು.  ವಿಶ್ವಕಪ್ ಮತ್ತು ಭಾರತೀಯ ಕ್ರಿಕೆಟ್ ನ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕಠಿಣ ನಿರ್ಧಾರ ಕೈಗೊಳ್ಳುವ  ಅವಶ್ಯಕತೆ ಇದ್ದು, ನಾವು ಆಸ್ಟ್ರೇಲಿಯಾ ಮಾದರಿಯಲ್ಲಿ ನಿರ್ಣಯ ಕೈಗೊಳ್ಳಬೇಕಾದ ಅಗತ್ಯತೆ ಇದೆ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು