ದುಬೈ: ಸಂಶಯಾಸ್ಪದ ಬೌಲಿಂಗ್ ಶೈಲಿಯಿಂದಾಗಿ ಟೀಂ ಇಂಡಿಯಾದ ಪಾರ್ಟ್ ಟೈಂ ಸ್ಪಿನ್ನರ್ ಅಂಬಾಟಿ ರಾಯುಡುಗೆ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಬೌಲಿಂಗ್ ಮಾಡದಂತೆ ನಿಷೇಧ ಹೇರಲಾಗಿದೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ) ದೃಢಪಡಿಸಿದೆ.
ಸಂಶಯಾಸ್ಪದ ಬೌಲಿಂಗ್ ಶೈಲಿ ಬಗ್ಗೆ ಅಂಪಾಯರ್ ಗಳು ವರದಿ ಮಾಡಿದ 14 ದಿನಗಳ ಒಳಗಡೆ 33 ಹರೆಯದ ರಾಯುಡು ಬೌಲಿಂಗ್ ಪರೀಕ್ಷೆಗೆ ಒಳಗಾಗಬೇಕಿತ್ತು. ಆದರೆ ರಾಯುಡು ಹಾಗೆ ಮಾಡಿಲ್ಲ.
ಐಸಿಸಿ ನಿಯಮ 4.2 ಪ್ರಕಾರ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಬೌಲಿಂಗ್ ಮಾಡದಂತೆ ರಾಯುಡುಗೆ ನಿಷೇಧ ಹೇಲಾಗಿದೆ.
ರಾಯುಡು ಪರೀಕ್ಷೆಗೆ ಒಳಪಡುವ ತನಕ ನಿಷೇಧ ಮುಂದುವರಿಯಲಿದೆ ಎಂದು ಐಸಿಸಿ ಹೇಳಿದೆ.