News Karnataka Kannada
Saturday, April 27 2024
ಕ್ರೀಡೆ

ಅವನಿ ಲೇಖರ ಐತಿಹಾಸಿಕ ಸಾಧನೆಗೆ ಟ್ವಿಟ್‌ ಮೂಲಕ ಪ್ರಧಾನಿ ಮೋದಿ ಅಭಿನಂದನೆ

Modi
Photo Credit : News Kannada

 ದೆಹಲಿ: ಪ್ಯಾರಾ ಶೂಟಿಂಗ್ ವಿಶ್ವಕಪ್‌ನಲ್ಲಿ ಭಾರತದ ಶೂಟರ್‌ ಗಳಾದ ಅವನಿ ಲೆಖರಾ ಹಾಗೂ ಶ್ರೀಹರ್ಷ ದೇವರಡ್ಡಿ ಚಿನ್ನ ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಪ್ರಧಾನಿ ಮೋದಿ, ಟ್ವಿಟ್‌ ಮೂಲಕ ಇಬ್ಬರು ಸಾಧಕರನ್ನು ಪ್ರಶಂಸಿಸಿದ್ದಾರೆ.

ಫ್ರಾನ್ಸ್‌ನ ಚಟೌರೊಕ್ಸ್‌ನಲ್ಲಿ ನಡೆದ ಪ್ಯಾರಾ ಶೂಟಿಂಗ್ ವಿಶ್ವಕಪ್‌ನ ಮಹಿಳೆಯರ ವಿಭಾಗದ 10 ಮೀಟರ್ ಏರ್ ರೈಫಲ್ ಸ್ಟ್ಯಾಂಡಿಂಗ್ ಸ್ಪರ್ಧೆಯಲ್ಲಿ ಲೆಖರಾ ವಿಶ್ವ ದಾಖಲೆಯೊಂದಿಗೆ ಚಿನ್ನ ಗೆದ್ದರು. 20 ವರ್ಷದ ಲೆಖರಾ 2024 ರ ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಸ್ಥಾನ ಸಂಪಾದಿಸುವ ಹಾದಿಯಲ್ಲಿ ತಮ್ಮದೇ ಹಿಂದಿನ ದಾಖಲೆಯಾದ 249.6 ಮೀ. ವಿಶ್ವ ದಾಖಲೆಯನ್ನು ಮುರಿದರು. ಭಾರತದ ಮತ್ತೊರ್ವ ಶೂಟರ್ ಶ್ರೀಹರ್ಷ ದೇವರಡ್ಡಿ ಪುರುಷರ ವಿಭಾಗದಲ್ಲಿ ಚಿನ್ನಕ್ಕೆ ಗುರಿಯಿಟ್ಟರು.
ಪ್ಯಾರಾ ಶೂಟಿಂಗ್ ವಿಶ್ವಕಪ್‌ನಲ್ಲಿ ಚಿನ್ನ ಗೆದ್ದ ಇಬ್ಬರು ಸಾಧಕರನ್ನು ಪ್ರಧಾನಿ ಮೋದಿ ಕೊಂಡಾಡಿದ್ದಾರೆ. ಇದೊಂದು ಐತಿಹಾಸಿಕ ಸಾಧನೆ ಎಂದು ಬಣ್ಣಿಸಿದ್ದಾರೆ.

“ಈ ಐತಿಹಾಸಿಕ ಸಾಧನೆಗಾಗಿ ಅವನಿ ಲೇಖರ ಅವರಿಗೆ ಅಭಿನಂದನೆಗಳು. ನೀವು ಯಶಸ್ಸಿನ ಹೊಸ ಎತ್ತರಕ್ಕೆ ಏರುತ್ತಿರಿ.. ಹೀಗೆ ನಿಮ್ಮ ಸಾಧನೆಗಳು ಇತರರಿಗೆ ಸ್ಫೂರ್ತಿ ನೀಡುತ್ತಿರಲಿ. ನಿಮಗೆ ಶುಭಾಶಯಗಳು ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಮತ್ತೊಂದು ಟ್ವೀಟ್‌ನಲ್ಲಿ, “ಶ್ರೀಹರ್ಷ ದೇವರಡ್ಡಿ ಚಿನ್ನ ಗೆದ್ದಿದ್ದಕ್ಕಾಗಿ ಹೆಮ್ಮೆಪಡುತ್ತೇನೆ. ಅವರ ಸಂಕಲ್ಪ ನಿಜವಾಗಿಯೂ ಪ್ರೇರೇಪಿಸುವಂತಹದ್ದು. ಅವರ ಮುಂದಿನ ಎಲ್ಲಾ ಪ್ರಯತ್ನಗಳಿಗೆ ಶುಭಾಶಯಗಳು” ಎಂದು ಮೋದಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು