News Karnataka Kannada
Saturday, April 27 2024
ಕ್ರೀಡೆ

ಮಹಿಳಾ ವಿಶ್ವಕಪ್‌ ನಲ್ಲಿ ಬಾಂಗ್ಲಾ ವನಿತೆಯರು ಪಾಕ್‌ ವಿರುದ್ಧ 9 ರನ್‌ ಗಳ ಜಯ

Cricket
Photo Credit :

ನ್ಯೂಜಿಲ್ಯಾಂಡ್‌ ನಲ್ಲಿ ನಡೆಯುತ್ತಿರುವ ಮಹಿಳಾ ವಿಶ್ವಕಪ್‌ ನಲ್ಲಿ ಬಾಂಗ್ಲಾ ವನಿತೆಯರು ಪಾಕ್‌ ವಿರುದ್ಧ 9 ರನ್‌ ಗಳ ಜಯ ದಾಖಲಿಸುವ ಮೂಲಕ ಹೊಸ ಇತಿಹಾಸ ಬರೆದಿದ್ದಾರೆ.

ಇದು ವಿಶ್ವಕಪ್‌ ನಲ್ಲಿ ಬಾಂಗ್ಲಾ ಮಹಿಳೆಯರಿಗೆ ಒಲಿದ ಮೊಟ್ಟ ಮೊದಲ ಗೆಲುವಾಗಿದೆ. ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಗೆ ಇಳಿದ ಬಾಂಗ್ಲಾ ವನಿತೆಯರು ನಿಗದಿತ 50 ಓವರ್‌ ಗಳಲ್ಲಿ 234 ರನ್‌ ಕಲೆಹಾಕಿದರು.

ಮಧ್ಯಮ ಕ್ರಮಾಂಕದ ಆಟಗಾರ್ತಿ ಫರ್ಗ್ಯೂನಾ ಹಕ್‌ ತಂಡದ 71, ನಿಗರ್‌ ಸುಲ್ತಾನ 46 , ಶರ್ಮಿನಾ ಅಕ್ತರ್‌ 44 ಕಲೆಹಾಕಿ ತಂಡ ಉತ್ತಮ ಮೊತ್ತ ತಲುಪುವಂತೆ ನೋಡಿಕೊಂಡರು.

ಗುರಿ ಬೆನ್ನಟ್ಟಿದ ಪಾಕ್‌ ವನಿತೆಯರು ಸಿದ್ರಾ ಅಮೀನ್‌ ಶತಕದ ಹೊರತಾಗಿಯೂ 50 ಓವರ್‌ ಗಳಲ್ಲಿ 225 ರನ್‌ ಗಳನ್ನಷ್ಟೇ ಕಲೆಹಾಕಿ ಸೋಲೊಪ್ಪಿಕೊಂಡಿತು. ಈ ಗೆಲುವಿನೊಂದಿಗೆ ಬಾಂಗ್ಲಾ ಪಾಯಿಂಟ್‌ ಪಟ್ಟಿಯಲ್ಲಿ 6 ನೇ ಸ್ಥಾನಕ್ಕೇರಿದರೆ, ಪಾಕ್‌ ಆಡಿದ ಎಲ್ಲಾ ನಾಲ್ಕು ಪಂದ್ಯಗಳನ್ನು ಸೋತು ಪಂದ್ಯಾವಳಿಯಿಂದ ಬಹುತೇಕ ಹೊರಬಿದ್ದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು