ಮಾಸ್ಕೋ: ಫುಟ್ಬಾಲ್ ವಿಶ್ವಕಪ್ ನ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ರಷ್ಯಾ 5-0ಯಿಂದ ಸೌದಿ ಅರೇಬಿಯಾ ವಿರುದ್ಧ ಜಯಭೇರಿ ಬಾರಿಸಿದೆ.
ಯೂರಿ ಗಾಜಿನ್ಸ್ಕಿ(12), ಡೆನಿಸ್ ಚೆರಿಶೇವ್ (43, 90 + 1), ಆರ್ಟೆಮ್ ಡಿಝುಬಾ (71) ಮತ್ತು ಅಲೆಕ್ಸಾಂಡರ್ ಗೋಲೋವಿನ್ (90 + 4) ಆತಿಥೇಯರ ಪರವಾಗಿ ಗೋಲು ದಾಖಲಿಸಿದರು.
ಆರಂಭದಲ್ಲಿಯೇ ತುಂಬಾ ಆಕ್ರಮಣಕಾರಿಯಾಗಿ ಆಡಿದ ರಷ್ಯಾ, ಸೌದಿ ಅರೇಬಿಯಾಕ್ಕೆ ಭೀತಿ ಉಂಟು ಮಾಡಿತು. ಕೆಲವು ಕಾರ್ನರ್ ಪಡೆದ ರಷ್ಯಾ ಪರವಾಗಿ ಅಲೆಕ್ಸಾಂಡರ್ ಗೋಲೋವಿನ್ ಮೊದಲ ಗೋಲು ಬಾರಿಸಿದರು.
ಇದರ ಬಳಿಕ ರಷ್ಯಾ ತನ್ನ ಆಕ್ರಮಣವನ್ನು ಮತ್ತಷ್ಟು ಹೆಚ್ಚಿಸಿ, ಸೌದಿಯ ರಕ್ಷಣಾ ಪಾಳಯದ ಮೇಲೆ ಒತ್ತಡ ಹೇರಿ ನಾಲ್ಕು ಗೋಲು ಗಳಿಸಲು ಯಶಸ್ವಿಯಾಯಿತು.