ಕ್ರಿಸ್ ಬ್ರಾಡ್ ಕೈಬಿಟ್ಟಿರುವುದಕ್ಕೆ ಪಶ್ಚಾತ್ತಾಪವಿಲ್ಲ: ಬೆನ್ ಸ್ಟೋಕ್ಸ್

ಕ್ರಿಸ್ ಬ್ರಾಡ್ ಕೈಬಿಟ್ಟಿರುವುದಕ್ಕೆ ಪಶ್ಚಾತ್ತಾಪವಿಲ್ಲ: ಬೆನ್ ಸ್ಟೋಕ್ಸ್

HSA   ¦    Jul 13, 2020 07:42:32 PM (IST)
ಕ್ರಿಸ್ ಬ್ರಾಡ್ ಕೈಬಿಟ್ಟಿರುವುದಕ್ಕೆ ಪಶ್ಚಾತ್ತಾಪವಿಲ್ಲ: ಬೆನ್ ಸ್ಟೋಕ್ಸ್

ಲಂಡನ್: ಮೊದಲ ಟೆಸ್ಟ್ ನಿಂದ ವೇಗಿ ಸ್ಟುವರ್ಟ್ ಬ್ರಾಡ್ ಅವರನ್ನು ಕೈಬಿಟ್ಟಿರುವುದಕ್ಕೆ ಯಾವುದೇ ಪಶ್ಚಾತ್ತಾಪವಿಲ್ಲವೆಂದು ಇಂಗ್ಲೆಂಡ್ ಹಂಗಾಮಿ ನಾಯಕ ಬೆನ್ ಸ್ಟೋಕ್ಸ್ ತಿಳಿಸಿದರು.

ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ನ್ನು ಇಂಗ್ಲೆಂಡ್ 4 ವಿಕೆಟ್ ಗಳಿಂದ ಕಳಕೊಂಡಿದೆ.

200 ರನ್ ಗಳ ಗುರಿ ಪಡೆದಿದ್ದ ವಿಂಡೀಸ್ ಜೆರ್ಮೈನ್ ಬ್ಲ್ಯಾಕ್ ವುಡ್ ಉತ್ತಮ ಬ್ಯಾಟಿಂಗ್ ನೆರವಿನಿಂದ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಪಡೆಯಲು ನೆರವಾಗಿದೆ.

ಬ್ರಾಡ್ ಕೈಬಿಟ್ಟಿರುವುದಕ್ಕೆ ಪಶ್ಚಾತ್ತಾಪವಿಲ್ಲ ಮತ್ತು ಅವರಂತಹ ಆಟಗಾರನನ್ನು ಹೊರಗಿಡಬೇಕಾಗಿರುವುದು ನಮ್ಮ ಅದೃಷ್ಟ ಮತ್ತು ಎರಡನೇ ಟೆಸ್ಟ್ ನಲ್ಲಿ ಅವರು ಆಡಿದರೆ ಖಂಡಿತವಾಗಿಯೂ ಕೆಲವು ವಿಕೆಟ್ ಪಡೆಯಲಿರುವರು ಎಂದು ಸ್ಟೋಕ್ಸ್ ತಿಳಿಸಿದರು.

138 ಟೆಸ್ಟ್ ಪಂದ್ಯಗಳಲ್ಲಿ 485 ವಿಕೆಟ್ ಪಡೆದಿರುವ ಬ್ರಾಡ್, ಮೊದಲ ಟೆಸ್ಟ್ ನಿಂದ ಕೈಬಿಟ್ಟಿರುವುದಕ್ಕೆ ತುಂಬಾ ಕೋಪ, ಸಿಡುಕು ಮತ್ತು ಬೇಸರವಾಗಿದೆ ಎಂದು ಅವರು ಹೇಳಿದ್ದರು.