ಮಾಯಾಂಕ್ ಅಗರ್ವಾಲ್ ಮತ್ತೊಂದು ಶತಕ: ದಿನದ ಗೌರವ ಪಡೆದ ಭಾರತ

ಮಾಯಾಂಕ್ ಅಗರ್ವಾಲ್ ಮತ್ತೊಂದು ಶತಕ: ದಿನದ ಗೌರವ ಪಡೆದ ಭಾರತ

HSA   ¦    Oct 10, 2019 05:46:54 PM (IST)
ಮಾಯಾಂಕ್ ಅಗರ್ವಾಲ್ ಮತ್ತೊಂದು ಶತಕ: ದಿನದ ಗೌರವ ಪಡೆದ ಭಾರತ

ಪುಣೆ: ಆರಂಭಿಕ ಆಟಗಾರ ಮಾಯಾಂಕ್ ಅಗರ್ವಾಲ್ ಶತಕ(108) ಮತ್ತು ಚೇತೇಶ್ವರ ಪೂಜಾರ(58) ಮತ್ತು ವಿರಾಟ್ ಕೊಹ್ಲಿ(63) ಅರ್ಧಶತಕದಿಂದ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ನಲ್ಲಿ ಭಾರತ ಮೂರು ವಿಕೆಟ್ ನಷ್ಟಕ್ಕೆ 273 ರನ್ ಮಾಡಿದೆ.

ಮಂದ ಬೆಳಕಿನಿಂದಾಗಿ ಮೊದಲ ದಿನದಾಟವನ್ನು ಬೇಗನೆ ಕೊನೆಗೊಳಿಸಿದ ವೇಳೆ ಭಾರತ ಮೂರು ವಿಕೆಟ್ ನಷ್ಟಕ್ಕೆ 273 ರನ್ ಮಾಡಿದೆ.

ವಿರಾಟ್ ಕೊಹ್ಲಿ ಮತ್ತು ಅಜಿಂಕ್ಯ ರಹಾನೆ ನಾಳೆಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಮೊದಲ ಟೆಸ್ಟ್ ನಲ್ಲಿ ದ್ವಿಶತಕ ಬಾರಿಸಿದ್ದ ಮಯಾಂಕ್ ಎರಡನೇ ಟೆಸ್ಟ್ ನಲ್ಲೂ ತನ್ನ ಉತ್ತಮ ಫಾರ್ಮ್ ನ್ನು ಮುಂದುವರಿಸಿ 195 ಎಸೆತಗಳಲ್ಲಿ 16 ಬೌಂಡರಿ ಮತ್ತು 2 ಸಿಕ್ಸರ್ ಸಹಿತ 108 ರನ್ ಬಾರಿಸಿದರು.