ನಾನು ಯಾರ ಬೆದರಿಕೆಗೂ ಹೆದರಲ್ಲ: ಕುಸ್ತಿ ಪಟು ಪೋಗಟ್

ನಾನು ಯಾರ ಬೆದರಿಕೆಗೂ ಹೆದರಲ್ಲ: ಕುಸ್ತಿ ಪಟು ಪೋಗಟ್

HSA   ¦    Apr 17, 2020 08:15:33 PM (IST)
ನಾನು ಯಾರ ಬೆದರಿಕೆಗೂ ಹೆದರಲ್ಲ: ಕುಸ್ತಿ ಪಟು ಪೋಗಟ್

ನವದೆಹಲಿ: ತಬ್ಲಿಘಿ ಜಮಾತ್ ಜನರ ವಿರುದ್ಧ ನೀಡಿರುವ ತನ್ನ ಹೇಳಿಕೆಯನ್ನು ಪ್ರತಿಪಾದಿಸಿದ ಕುಸ್ತಿ ಪಟು ಬಬಿತಾ ಪೋಗಟ್ ಅವರು, ತಾನು ಯಾವುದೇ ಬೆದರಿಕೆಗೆ ಹೆದರುವುದಿಲ್ಲವೆಂದು ಹೇಳಿದ್ದಾರೆ.

ನಾನು ಝೈರಾ ವಾಸಿಂ ಅಲ್ಲ ಮತ್ತು ಯಾರ ಬೆದರಿಕೆಗೂ ಹೆದರುವುದಿಲ್ಲ ಎಂದು ಅವರು ತಿಳಿಸಿದರು.

ವಿವಾದಾತ್ಮಕ ಹೇಳಿಕೆ ಹಾಕಿದ ಪೋಗಟ್ ಅವರ ಟ್ವಿಟ್ಟರ್ ಖಾತೆಯನ್ನು ರದ್ದು ಮಾಡಲಾಗಿತ್ತು. ಪೋಗಟ್ ಅವರು ಹ್ಯಾಶ್ ಟ್ಯಾಗ್ ಬಳಸಿದ್ದು, ಇದರಲ್ಲಿ ಹಲವಾರು ಮಂದಿಯನ್ನು ದೂರಲಾಗಿತ್ತು.

ನಾನು ಕಳೆದ ಕೆಲವು ದಿನಗಳಿಂದ ಟ್ವೀಟ್ ಮಾಡುತ್ತಿದ್ದೇನೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಕೆಲವು ಬೆದರಿಕೆ ಬಂದಿದೆ. ನಾನು ಝೈರಾ ವಸೀಂ ಅಲ್ಲ. ನನಗೆ ಬೆದರಿಕೆ ಹಾಕುವುದು ಬೇಡ. ನಾನು ಯಾವಾಗಲೂ ದೇಶಕ್ಕಾಗಿ ಹೋರಾಡಿದ್ದೇನೆ. ನನ್ನ ಟ್ವೀಟ್ ಗೆ ಬದ್ಧಳಾಗಿದ್ದೇನೆ ಮತ್ತು ಇದರಲ್ಲಿ ಏನೂ ತಪ್ಪಿಲ್ಲ ಎಂದರು.