ಇಂಗ್ಲೆಂಡ್ ತಂಡಕ್ಕೆ ಮರಳಿದ ಮೊಯಿನ್ ಅಲಿ, ವುಡ್, ಆರ್ಚರ್

ಇಂಗ್ಲೆಂಡ್ ತಂಡಕ್ಕೆ ಮರಳಿದ ಮೊಯಿನ್ ಅಲಿ, ವುಡ್, ಆರ್ಚರ್

HSA   ¦    Dec 14, 2019 11:32:28 AM (IST)
ಇಂಗ್ಲೆಂಡ್ ತಂಡಕ್ಕೆ ಮರಳಿದ ಮೊಯಿನ್ ಅಲಿ, ವುಡ್, ಆರ್ಚರ್

ಲಂಡನ್: ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಮೂರು ಪಂದ್ಯಗಳ ಟಿ-20 ಸರಣಿಗೆ ಇಂಗ್ಲೆಂಡ್ ತಂಡವು ಆಲ್ ರೌಂಡರ್ ಮೊಯಿನ್ ಅಲಿ, ವೇಗಿಗಳಾದ ಮಾರ್ಕ್ ವುಡ್ ಮತ್ತು ಜೊಫ್ರಾ ಆರ್ಚರ್ ನ್ನು ತಂಡಕ್ಕೆ ಸೇರಿಸಿಕೊಂಡಿದೆ.

ಟಿ-20 ಸರಣಿಯು ಫೆ.12ರಿಂದ ಫೆ.16ರ ತನಕ ನಡೆಯಲಿದೆ. ಜೋಸ್ ಬಟ್ಲರ್, ಜಾಸನ್ ರಾಯ್ ಮತ್ತು ಆಲ್ ರೌಂಡರ್ ಬೆನ್ ಸ್ಟೋಕ್ಸ್ ಅವರನ್ನು ತಂಡಕ್ಕೆ ಕರೆಸಿಕೊಳ್ಳಲಾಗಿದೆ.

ನ್ಯೂಜಿಲೆಂಡ್ ವಿರುದ್ಧದ ಟಿ-20 ಸರಣಿಯಲ್ಲಿ ತಂಡದಲ್ಲಿದ್ದ ಟಾಮ್ ಬಾಂಟನ್, ಸ್ಯಾಮ್ ಬಿಲ್ಲಿಂಗ್ಸ್, ಲೆವಿಸ್ ಜಾರ್ಜಿ, ಸಕಿಬ್ ಮೊಹಮ್ಮದ್ ಮತ್ತು ಜೇಮ್ಸ್ ವಿನ್ಸ್ ನ್ನು ತಂಡದಿಂದ ಕೈಬಿಡಲಾಗಿದೆ.