ರಿಷಭ್ ಪಂತ್ ಗೆ ಕನಿಷ್ಠ ಒಂದು ವಾರ ವಿಶ್ರಾಂತಿ: ಶ್ರೇಯಸ್ ಅಯ್ಯರ್

ರಿಷಭ್ ಪಂತ್ ಗೆ ಕನಿಷ್ಠ ಒಂದು ವಾರ ವಿಶ್ರಾಂತಿ: ಶ್ರೇಯಸ್ ಅಯ್ಯರ್

Megha R Sanadi   ¦    Oct 12, 2020 04:15:34 PM (IST)
ರಿಷಭ್ ಪಂತ್ ಗೆ ಕನಿಷ್ಠ ಒಂದು ವಾರ ವಿಶ್ರಾಂತಿ: ಶ್ರೇಯಸ್ ಅಯ್ಯರ್

ದುಬೈ: ದೆಹಲಿ ಕ್ಯಾಪಿಟಲ್ಸ್ ಅಭಿಮಾನಿಗಳಿಗೆ ಶಾಕ್ ನೀಡಿದ ನಾಯಕ ಶ್ರೇಯಸ್ ಅಯ್ಯರ್, ವಿಕೆಟ್ ಕೀಪರ್ ಹಾಗೂ ಬ್ಯಾಟ್ಸ್‌ಮನ್ ಆಗಿರುವಂತಹ ರಿಷಭ್ ಪಂತ್ ಅವರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2020 ಪಂದ್ಯಗಳನ್ನು ಕನಿಷ್ಠ ಒಂದು ವಾರ ಹೊರಗಿರಲಿದ್ದಾರೆ ಎಂದು ನಾಯಕ ಶ್ರೇಯಸ್ ಖಚಿತಪಡಿಸಿದ್ದಾರೆ. 

ರಾಜಸ್ಥಾನ್ ರಾಯಲ್ಸ್ ವಿರುದ್ಧದ ಶಾರ್ಜಾದಲ್ಲಿ ದೆಹಲಿ ತಂಡ ಆಡುತ್ತಿದ್ದ ಸಮಯದಲ್ಲಿ ಪಂತ್ ಗಾಯಗೊಂಡಿದ್ದರು. ಅದಾದ ಬಳಿಕ ಭಾನುವಾರ ನಡೆದಿದ್ದ ಮುಂಬೈ ಇಂಡಿಯನ್ಸ್ ವಿರುದ್ಧದ ದೆಹಲಿ ಕ್ಯಾಪಿಟಲ್ಸ್ ನ ಪಂದ್ಯದಲ್ಲಿ ಪಂತ್ ಆಡಲಿಲ್ಲ ಹಾಗೂ ಅದೇ ಪಂದ್ಯದಲ್ಲಿ ದೆಹಲಿ ಮುಂಬೈ ಇಂಡಿಯನ್ಸ್ ವಿರುದ್ಧ ಐದು ವಿಕೆಟ್ ಕಳೆದುಕೊಂಡು ಸೋಲನ್ನು ಎದುರಿಸಿತು.

ಆ ಪಂದ್ಯದ ಬಳಿಕ ಮಾತನಾಡಿದ ನಾಯಕ ಅಯ್ಯರ್, "ಪಂತ್‌ಗೆ ಕನಿಷ್ಠ ಒಂದು ವಾರ ವಿಶ್ರಾಂತಿಯನ್ನು ವೈದ್ಯರು ಸೂಚಿಸಿದ್ದಾರೆ, ಅವರು ಬೇಗ ಚೇತರಿಸಿಕೊಂಡು ಬರಲಿ ಎಂದು ಕೋರುತ್ತೇನೆ" ಎಂದು ಹೇಳಿದರು.

ದೆಹಲಿ ಕ್ಯಾಪಿಟಲ್ಸ್ ಅ. 14 ರಂದು ರಾಜಸ್ಥಾನ್ ರಾಯಲ್ಸ್ ವಿರುದ್ಧ ಆಡಲಿದ್ದು, ಅ. 17 ರಂದು ಚೆನ್ನೈ ಸೂಪರ್ ಕಿಂಗ್ಸ್ ಜೊತೆ ಸೆಣಸಲಿದೆ. ಈ ಪಂದ್ಯಗಳಲ್ಲಿ ಪಂತ್ ಅವರ ಅನುಪಸ್ಥಿತಿ ಇರಲಿದೆ.