ವೃದ್ಧಿಮಾನ್ ಸಹಾ ಹುಟ್ಟುಹಬ್ಬದ ಸಂಭ್ರಮದಲ್ಲಿ ಭಾಗಿಯಾದ ಅನುಷ್ಕಾ

ವೃದ್ಧಿಮಾನ್ ಸಹಾ ಹುಟ್ಟುಹಬ್ಬದ ಸಂಭ್ರಮದಲ್ಲಿ ಭಾಗಿಯಾದ ಅನುಷ್ಕಾ

HSA   ¦    Mar 08, 2021 11:34:57 AM (IST)
ವೃದ್ಧಿಮಾನ್ ಸಹಾ ಹುಟ್ಟುಹಬ್ಬದ ಸಂಭ್ರಮದಲ್ಲಿ ಭಾಗಿಯಾದ ಅನುಷ್ಕಾ

ನವದೆಹಲಿ: ಇಂಗ್ಲೆಂಡ್  ವಿರುದ್ಧ 3-1ರಿಂದ ಟೆಸ್ಟ್ ಸರಣಿ ಗೆದ್ದು ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಗೆ ಅರ್ಹತೆ ಪಡೆದುಕೊಂಡಿರುವ ಟೀಂ ಇಂಡಿಯಾ ವೃದ್ಧಿಮಾನ್ ಸಹಾ ಅವರ ಹುಟ್ಟುಹಬ್ಬವನ್ನು ಆಚರಿಸಿದೆ.

ಅಹ್ಮದಾಬಾದ್ ನಲ್ಲಿ ವೃದ್ಧಿಮಾನ್ ಸಹಾ ಹುಟ್ಟುಹಬ್ಬದಲ್ಲಿ ನಾಯಕ ವಿರಾಟ್ ಕೊಹ್ಲಿ ಅವರ ಪತ್ನಿ ಅನುಷ್ಕಾ ಶರ್ಮಾ ಅವರು ಕೂಡ ಭಾಗಿಯಾದರು. ನಗರದಲ್ಲಿರುವ ಬಯೋ ಸೆಕ್ಯೂರ್ ಬಬಲ್ ನಲ್ಲಿರುವ ಟೀಂ ಇಂಡಿಯಾದ ಆಟಗಾರರು ಹುಟ್ಟುಹಬ್ಬದಲ್ಲಿ ಪಾಲ್ಗೊಂಡರು.

ಟೀಂ ಇಂಡಿಯಾದ ಭಾಗವಾಗಿದ್ದ ವೃದ್ಧಿಮಾನ್ ಸಹಾ ಸರಣಿಯಲ್ಲಿ ಒಂದು ಪಂದ್ಯವನ್ನು ಆಡಿರಲಿಲ್ಲ. ರಿಷಬ್ ಪಂತ್ ವಿಕೆಟ್ ಕೀಪರ್ ಆಗಿ ಆಡಿದ್ದು, 345 ರನ್ ಮಾಡಿ ಟೀಂ ಇಂಡಿಯಾದ ಎರಡನೇ ಗರಿಷ್ಠ ಸ್ಕೋರರ್ ಆಗಿರುವರು.