ಐಪಿಎಲ್ ಗಾಗಿ ವಿಶ್ವಕಪ್ ಮುಂದೂಡಲು ಬಯಸಲ್ಲ: ಬಿಸಿಸಿಐ

ಐಪಿಎಲ್ ಗಾಗಿ ವಿಶ್ವಕಪ್ ಮುಂದೂಡಲು ಬಯಸಲ್ಲ: ಬಿಸಿಸಿಐ

HSA   ¦    May 22, 2020 05:35:13 PM (IST)
ಐಪಿಎಲ್ ಗಾಗಿ ವಿಶ್ವಕಪ್ ಮುಂದೂಡಲು ಬಯಸಲ್ಲ: ಬಿಸಿಸಿಐ

ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರ ಮಂಡಳಿ(ಬಿಸಿಸಿಐ) ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ ಟೂರ್ನಿಯನ್ನು ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್)ಗಾಗಿ ಮುಂದೂಡಬೇಕೆಂದು ಬಯಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಆಸ್ಟ್ರೇಲಿಯಾ ಮಾಧ್ಯಮಗಳಲ್ಲಿ ವಿಶ್ವಕಪ್ ಮುಂದೂಡುವ ಬಗ್ಗೆ ಸುದ್ದಿ ಹಬ್ಬಿತ್ತು. ಆದರೆ ಬಿಸಿಸಿಐ ಖಜಾಂಚಿ ಅರುಣ್ ಸಿಂಗ್ ಧುಮಾಲ್ ಅವರು ಸುದ್ದಿಸಂಸ್ಥೆಗೆ ಈ ಬಗ್ಗೆ ಮಾಹಿತಿ ನೀಡಿದರು.

ವಿಶ್ವಕಪ್ ಮುಂದೂಡುವಂತಹ ಸ್ಥಿತಿ ಬಂದರೆ ಆಗ ಅಕ್ಟೋಬರ್-ನವಂಬರ್ ನಲ್ಲಿ ಐಪಿಎಲ್ ನಡೆಸಲು ಬಯಸಿದ್ದೇವೆ ಎಂದು ಅವರು ಹೇಳಿದರು.

ಕ್ರಿಕೆಟಿನ ಪ್ರಬಲ ಬೋರ್ಡ್ ಆಗಿರುವಂತಹ ಭಾರತವು ವಿಶ್ವಕಪ್ ಮುಂದೂಡುವಂತೆ ಒತ್ತಡ ಹೇರಬಹುದು ಎಂದು ಆಸ್ಟ್ರೇಲಿಯಾದ ಮಾಧ್ಯಮಗಳಲ್ಲಿ ಸುದ್ದಿಯಾಗಿದೆ.