ಲಾಕ್ ಡೌನ್ ವೇಳೆ ಬಡಬಗ್ಗರಿಗೆ ಗಂಗೂಲಿ ಸಹಾಯಹಸ್ತ

ಲಾಕ್ ಡೌನ್ ವೇಳೆ ಬಡಬಗ್ಗರಿಗೆ ಗಂಗೂಲಿ ಸಹಾಯಹಸ್ತ

HSA   ¦    Apr 04, 2020 06:23:09 PM (IST)
ಲಾಕ್ ಡೌನ್ ವೇಳೆ ಬಡಬಗ್ಗರಿಗೆ ಗಂಗೂಲಿ ಸಹಾಯಹಸ್ತ

ಕೊಲ್ಕತ್ತಾ: ಮಾಜಿ ಕ್ರಿಕೆಟಿಗ ಹಾಗೂ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ಅವರು ಇಸ್ಕಾನ್ ಜತೆ ಸೇರಿ ದೇಶದಾದ್ಯಂತ ಲಾಕ್ ಡೌನ್ ಸಂದರ್ಭದಲ್ಲಿ ಲಕ್ಷಾಂತರ ಮಂದಿಗೆ ಆಹಾರ ಪೂರೈಕೆಗೆ ದೇಣಿಗೆ ನೀಡಿದ್ದಾರೆ.

ಕೊಲ್ಕತ್ತಾದ ಇಸ್ಕಾನ್ ಮಂದಿರಕ್ಕೆ ಭೇಟಿ ನೀಡಿದ ಗಂಗೂಲಿ ಅವರು ಅಗತ್ಯವಿರುವವರಿಗೆ ಆಹಾರ ಸಾಮಗ್ರಿ ವಿತರಿಸಿದರು. ಮಂದಿರದಲ್ಲಿ ತಯಾರಾಗುತ್ತಿರುವ ಆಹಾರದ ಬಗ್ಗೆ ಅವರು ಇದೇ ವೇಳೆ ಮಾಹಿತಿ ಪಡೆದುಕೊಂಡರು.

ರಾಜ್ಯದಲ್ಲಿ ಸುಮಾರು 20 ಸಾವಿರ ಜನರಿಗೆ ಆಹಾರ ಪೂರೈಕೆಗಾಗಿ ಅವರು ದೇಣಿಗೆ ನೀಡಿದರು. ಈಡನ್ ಗಾರ್ಡನ್ಸ್ ನ್ನು ರಾಜ್ಯ ಸರ್ಕಾರವು ಕೊರೋನಾ ಕ್ವಾರೆಂಟೈನ್ ಗೆ ಬಳಸಿಕೊಳ್ಳಬಹುದು ಎಂದು ಅವರು ಇದೇ ವೇಳೆ ತಿಳಿಸಿದರು.

ಕಳೆದ ವಾರ ಅಕ್ಕಿ ಖರೀದಿ ಮಾಡಿ ವಿತರಿಸಲು ಗಂಗೂಲಿ ಅವರು ಸುಮಾರು 50 ಲಕ್ಷ ರೂಪಾಯಿ ದೇಣಿಗೆ ನೀಡಿದ್ದರು.