ಟಿ-20 ರ‍್ಯಾಂಕಿಂಗ್: 6ನೇ ಸ್ಥಾನ ಕಾಯ್ದುಕೊಂಡ ರಾಹುಲ್, ಕೊಹ್ಲಿ 9ನೇ ಸ್ಥಾನಕ್ಕೇರಿಕೆ

ಟಿ-20 ರ‍್ಯಾಂಕಿಂಗ್: 6ನೇ ಸ್ಥಾನ ಕಾಯ್ದುಕೊಂಡ ರಾಹುಲ್, ಕೊಹ್ಲಿ 9ನೇ ಸ್ಥಾನಕ್ಕೇರಿಕೆ

HSA   ¦    Jan 11, 2020 02:55:47 PM (IST)
ಟಿ-20 ರ‍್ಯಾಂಕಿಂಗ್: 6ನೇ ಸ್ಥಾನ ಕಾಯ್ದುಕೊಂಡ ರಾಹುಲ್, ಕೊಹ್ಲಿ 9ನೇ ಸ್ಥಾನಕ್ಕೇರಿಕೆ

ನವದೆಹಲಿ: ಶ್ರೀಲಂಕಾ ವಿರುದ್ಧ 2-0ಯಿಂದ ಟಿ-20 ಸರಣಿಯನ್ನು ಟೀಂ ಇಂಡಿಯಾವು ಗೆದ್ದುಕೊಂಡ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ) ಬಿಡುಗಡೆ ಮಾಡಿರುವ ರ‍್ಯಾಂಕಿಂಗ್ ನಲ್ಲಿ ನಾಯಕ ವಿರಾಟ್ ಕೊಹ್ಲಿ, ಶಿಖರ್ ಧವನ್ ಒಂದು ಸ್ಥಾನ ಮೇಲೇರಿದರೆ, ಆರಂಭಿಕ ಕೆಎಲ್ ರಾಹುಲ್ ಅವರು ಆರನೇ ಸ್ಥಾನ ಕಾಯ್ದುಕೊಂಡಿದ್ದಾರೆ.

ಲಂಕಾ ವಿರುದ್ಧ 45 ಮತ್ತು 54 ರನ್ ಮಾಡಿದ ರಾಹುಲ್ 760 ಅಂಕದೊಂದಿಗೆ ಆರನೇ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ.

ಕೊಹ್ಲಿ ಈಗ ಟಿ-20ಯಲ್ಲಿ 9ನೇ ಸ್ಥಾನ ಪಡೆದಿದ್ದಾರೆ. ಧವನ್ 15ನೇ ಸ್ಥಾನದಲ್ಲಿದ್ದರೆ, ಮನೀಷ್ ಪಾಂಡೆ 70ನೇ ಸ್ಥಾನಕ್ಕೇರಿದ್ದಾರೆ.

ಟೀಂ ಇಂಡಿಯಾದ ವೇಗಿಗಳು ಉತ್ತಮವಾಗಿ ಮೇಲೆ ರ‍್ಯಾಂಕಿಗೆ ಏರಿದ್ದಾರೆ. ನವದೀಪ್ ಸೈನಿ 98ನೇ ಸ್ಥಾನಕ್ಕೇರಿದರೆ, ಶ್ರಾದುಲ್ ಠಾಕೂರ್ 92ನೇ ಸ್ಥಾನ ಪಡೆದಿದ್ದಾರೆ. ಜಸ್ಪೀತ್ ಬುಮ್ರಾ 39ನೇ ಸ್ಥಾನ ತಲುಪಿದ್ದಾರೆ.