ಪ್ರೇಕ್ಷಕರಿಲ್ಲದೆ ಇದ್ದರೂ ಆಟದ ತೀವ್ರತೆ ಕುಗ್ಗದು: ವಿರಾಟ್ ಕೊಹ್ಲಿ

ಪ್ರೇಕ್ಷಕರಿಲ್ಲದೆ ಇದ್ದರೂ ಆಟದ ತೀವ್ರತೆ ಕುಗ್ಗದು: ವಿರಾಟ್ ಕೊಹ್ಲಿ

HSA   ¦    Sep 17, 2020 08:24:03 PM (IST)
ಪ್ರೇಕ್ಷಕರಿಲ್ಲದೆ ಇದ್ದರೂ ಆಟದ ತೀವ್ರತೆ ಕುಗ್ಗದು: ವಿರಾಟ್ ಕೊಹ್ಲಿ

ದುಬೈ: ಕೊರೋನಾ ಕಾಲದಲ್ಲಿ ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ನಡೆಯುತ್ತಲಿದ್ದರೂ ಪ್ರೇಕ್ಷಕರಿಲ್ಲದೆ ಖಾಲಿ ಮೈದಾನದಲ್ಲಿ ಆಟಗಾರರು ಆಡಬೇಕಾಗಿದೆ.

ಪ್ರೇಕ್ಷಕರು ಮೈದಾನದಲ್ಲಿ ಇಲ್ಲದೆ ಇದ್ದರೂ ತಮ್ಮ ಆಟದ ತೀವ್ರತೆಗೆ ಯಾವುದೇ ಅಡ್ಡಿ ಆಗದು ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ ಸಿಬಿ) ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿರುವರು.

ಸೆ.19ರಿದ ನವಂಬರ್ 10ರ ತನಕ ಯುಎಇಯ ದುಬೈ, ಅಬುಧಾಬಿ ಮತ್ತು ಶಾರ್ಜಾದಲ್ಲಿ ಐಪಿಎಲ್ 2020 ಪಂದ್ಯಗಳು ನಡೆಯಲಿದೆ. ಕೊರೋನಾ ವೈರಸ್ ನಿಂದಾಗಿ ಮೊದಲ ಹಂತದ ಪಂದ್ಯಗಳು ಪ್ರೇಕ್ಷಕರಿಲ್ಲದೆ ಆಯೋಜನೆ ಆಗಲಿದೆ.

ನಾವೆಲ್ಲರೂ ಖಾಲಿ ಸ್ಟೇಡಿಯಂನ ಮುಂದೆ ಆಡಬೇಕಾಗಿದೆ. ಇದೊಂದು ತುಂಬಾ ವಿಚಿತ್ರ ಅನುಭವ. ಪ್ರೇಕ್ಷಕರು ಯಾವಾಗಲೂ ಕ್ರೀಡೆಗೆ ಬೆಂಬಲ ನೀಡುವರು. ಆದರೆ ಈ ರೀತಿಯಾಗಿ ಕ್ರೀಡೆಯನ್ನು ಆಡಲು ಆಗದು. ನಾವು ಇಲ್ಲಿ ಆಟದ ತೀವ್ರತೆ ಕಡಿಮೆ ಆಗಲು ಬಿಡಲ್ಲ ಮತ್ತು ಪ್ರೇಕ್ಷಕರು ಇದ್ದಂತೆ ಆಡುತ್ತೇವೆ ಎಂದು ಕೊಹ್ಲಿ ತಿಳಿಸಿದರು.