ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ರವಿಶಾಸ್ತ್ರಿ ಪುನರಾಯ್ಕೆ

ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ರವಿಶಾಸ್ತ್ರಿ ಪುನರಾಯ್ಕೆ

HSA   ¦    Aug 16, 2019 08:19:28 PM (IST)
ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ರವಿಶಾಸ್ತ್ರಿ ಪುನರಾಯ್ಕೆ

ಮುಂಬಯಿ: ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ರವಿ ಶಾಸ್ತ್ರಿ ಅವರನ್ನು 2021ರ ನವೆಂಬರ್ ತನಕ ಮುಂದುವರಿಸಲಾಗಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಮೂಲಗಳು ಹೇಳಿವೆ.

ನ್ಯೂಜಿಲೆಂಡ್ ನ ಮೈಕ್ ಹೆಸ್ಸನ್ ಮತ್ತು ಆಸ್ಟ್ರೇಲಿಯಾದ ಟಾಮ್ ಮೂಡಿ ಅವರನ್ನು ಅಂತಿಮ ಹಂತದಲ್ಲಿ ಹಿಂದಿಕ್ಕಿದ ರವಿ ಶಾಸ್ತ್ರಿ ಅವರು ಕೋಚ್ ಹುದ್ದೆಗೆ ಆಯ್ಕೆಯಾದರು ಎಂದು ಕ್ರಿಕೆಟ್ ಸಲಹಾ ಸಮಿತಿ(ಸಿಎಸಿ) ಮುಖ್ಯಸ್ಥ, ಮಾಜಿ ನಾಯಕ ಕಪಿಲ್ ದೆವ್ ಹೇಳಿದ್ದಾರೆ.

ಕೋಚ್ ಆಯ್ಕೆ ಸಮಿತಿಯಲ್ಲಿ ಮಾಜಿ ಆಟಗಾರ ಅಂಶುಮಾನ್ ಗಾಯಕ್ವಾಡ್ ಮತ್ತು ಶಾಂತ ರಂಗಸ್ವಾಮಿ ಅವರಿದ್ದರು.