ಫಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿದ ಕ್ರೀಡಾ ಸಚಿವ

ಫಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿದ ಕ್ರೀಡಾ ಸಚಿವ

Keerthana Bhat   ¦    Sep 14, 2020 06:31:11 PM (IST)
ಫಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿದ ಕ್ರೀಡಾ ಸಚಿವ

ಲಡಾಖ್: ಫಿಟ್ ಇಂಡಿಯಾ ಚುಳುವಳಿಯ ಅಂಗವಾಗಿ ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವ ಕಿರೆನ್ ರಿಜಿಜು ಇಂದು ಲಡಾಕ್‍ನಲ್ಲಿ ನಡೆದ ಫಿಟ್ ಇಂಡಿಯಾ ಸೈಕ್ಲೋಥಾನ್‍ನಲ್ಲಿ ಭಾಗವಹಿಸಿದರು. ಈ ಕಾರ್ಯಕ್ರಮದಲ್ಲಿ ಸ್ಥಳೀಯ ಸೈಕ್ಲಿಂಗ್ ಸಂಘ ಮತ್ತು ಕೇಂದ್ರ ಪ್ರದೇಶದ ಜನರು ಕೂಡ ಭಾಗವಹಿಸಿದ್ದರು.

ನಾವು ಲಡಾಕ್‍ನಲ್ಲಿ ಫಿಟ್ ಇಂಡಿಯಾ ಸೈಕ್ಲೋಥಾನ್ ಅನ್ನು ಸ್ಥಳೀಯ ಸೈಕ್ಲಿಂಗ್ ತಂಡ ಮತ್ತು ಸ್ಥಳಿಯ ಜನ ಪ್ರತಿನಿಧಿಗಳೊಂದಿಗೆ ಸೇರಿ ಮಾಡುತ್ತಿದ್ದೇವೆ, ಲಡಾಕ್‍ನ ಸುಂದರ ಸೌಂದರ್ಯವನ್ನು ಮಾತ್ರ ಆನಂದಿಸುವುದಲ್ಲದೇ ಈ ಫಿಟ್ ಇಂಡಿಯಾ ಚಳುವಳಿಯನ್ನು ಯಶಸ್ವಿಗೊಳಿಸಿ ಎಂದು ರಿಜಿಜು ಟ್ವಿಟರ್‍ ನಲ್ಲಿ ಬರೆದುಕೊಂಡಿದ್ದಾರೆ. 

ಫಿಟ್ ಇಂಡಿಯಾ ಸೈಕ್ಲೋಥಾನ್ ಜನರಲ್ಲಿ ಫಿಟ್ನೆಸ್ ಉತ್ತೇಜಿಸಲು ಆಗಸ್ಟ್ 15ರಿಂದ ಅಕ್ಟೋಬರ್ 2ರವರೆಗೆ ಅಂದರೆ ಒಂದುವರೆ ತಿಂಗಳ ಫಿಟ್ ಇಂಡಿಯಾ ಫ್ರೀಡಂ ರನ್ ಆಗಿದೆ.

ಇತ್ತೀಚಿನ ದಿನಗಳಲ್ಲಿ ಫಿಟ್ ಇಂಡಿಯಾ ಫಿಟ್ ಇಂಡಿಯಾ ಪ್ಲಾಗ್ ರನ್ ಮತ್ತು ಫಿಟ್ ಇಂಡಿಯಾ ಸೈಕ್ಲೋಥಾನ್ ನಂತಹ ಹಲವಾರು ಕಾರ್ಯಕ್ರಮಗಳನ್ನು ಜನಸಾಮಾನ್ಯರಿಗೆ ತಲುಪಿಸಲು ಆಯೋಜಿಸಿದೆ.

ಕೇಂದ್ರಾಡಳಿತ ಪ್ರದೇಶದಲ್ಲಿ ಕ್ರೀಡಾ ಮೂಲಸೌಕರ್ಯಗಳ ನಿರ್ಮಾಣವನ್ನು ಪ್ರಾರಂಭಿಸಲು ರಿಜಿಜು ಭಾನುವಾರ ಲಡಾಖ್‍ನ ಸ್ಥಳೀಯ ಸಂಸದ ಜಮ್ಯಾಂಗ್ ತ್ಸೆರಿಂಗ್ ನಮ್‍ಗ್ಯಾಲ್ ಮತ್ತು ಇತರರೊಂದಿಗೆ ಪ್ರಾಥಮಿಕ ಚರ್ಚೆ ನಡೆಸಿದರು.