ಬ್ಯಾಡ್ಮಿಂಟನ್ ಕೋಚ್ ಗೋಪಿಚಂದ್ ಗೆ ಕ್ವಾರೆಂಟೈನ್

ಬ್ಯಾಡ್ಮಿಂಟನ್ ಕೋಚ್ ಗೋಪಿಚಂದ್ ಗೆ ಕ್ವಾರೆಂಟೈನ್

HSA   ¦    May 12, 2020 04:09:37 PM (IST)
ಬ್ಯಾಡ್ಮಿಂಟನ್ ಕೋಚ್ ಗೋಪಿಚಂದ್ ಗೆ ಕ್ವಾರೆಂಟೈನ್

ನವದೆಹಲಿ: ರಾಷ್ಟ್ರೀಯ ಬ್ಯಾಡ್ಮಿಂಟನ್ ಕೋಚ್ ಪುಲ್ಲೇಲಾ ಗೋಪಿಚಂದ್ ಅವರು 14 ದಿನಗಳ ಕಾಲ ಕ್ವಾರೆಂಟೈನ್ ಗೆ ಒಳಪಡಲಿದ್ದಾರೆ.

ಅನಾರೋಗ್ಯಕ್ಕೆ ಒಳಗಾಗಿದ್ದ ತನ್ನ ಅಜ್ಜಿಯನ್ನು ನೋಡಲು ಹೈದರಾಬಾದ್ ನಿಂದ ಆಂಧ್ರ ಪ್ರದೇಶದ ಗುಂಟೂರಿಗೆ ಹೋಗಬೇಕಾಗಿ ಬಂತು. ಈ ವೇಳೆ ಹಿಂದೆ ಆಂಧ್ರ-ತೆಲಂಗಾಣ ಗಡಿಯಲ್ಲಿ ಬರುವಾಗ ಕ್ವಾರೆಂಟೈನ್ ಸೀಲ್ ಹಾಕಿದ್ದಾರೆ ಎಂದು ಗೋಪಿಚಂದ್ ವಿವರಿಸಿದರು.

ನನಗೆ ಯಾವುದೇ ರೀತಿಯ ಲಕ್ಷಣಗಳು ಇರಲಿಲ್ಲ. ಆದರೆ ಕ್ವಾರೆಂಟೈನ್ ಮುದ್ರೆ ಹಾಕುವುದು ನಿಯಮವಾಗಿದೆ ಎಂದು ಗೋಪಿಚಂದ್ ತಿಳಿಸಿದರು.

ಮುಂದಿನ 14 ದಿನಗಳ ಕಾಲ ತಾನು ಮನೆಯಲ್ಲೇ ಕಳೆಯಲಿದ್ದೇನೆ ಎಂದರು.