ಅಶ್ವಿನ್, ವಾಷಿಂಗ್ಟನ್ ಸುಂದರ್ ಗೆ ಆರು ದಿನಗಳ ಕ್ವಾರಂಟೈನ್

ಅಶ್ವಿನ್, ವಾಷಿಂಗ್ಟನ್ ಸುಂದರ್ ಗೆ ಆರು ದಿನಗಳ ಕ್ವಾರಂಟೈನ್

HSA   ¦    Jan 22, 2021 08:06:25 PM (IST)
ಅಶ್ವಿನ್, ವಾಷಿಂಗ್ಟನ್ ಸುಂದರ್ ಗೆ ಆರು ದಿನಗಳ ಕ್ವಾರಂಟೈನ್

ಚೆನ್ನೈ: ಆಸ್ಟ್ರೇಲಿಯಾ ಪ್ರವಾಸದಿಂದ ಹಿಂತಿರುಗಿರುವ ಪ್ರಮುಖ ಆಟಗಾರರಾದ ರವಿಚಂದ್ರನ್ ಅಶ್ವಿನ್ ಮತ್ತು ವಾಷಿಂಗ್ಟನ್ ಸುಂದರ್ ಅವರು ಆರು ದಿನಗಳ ಕಾಲ ಕ್ವಾರಂಟೈನ್ ನಲ್ಲಿ ಉಳಿಯಲಿರುವರು.

ತಮಿಳುನಾಡು ಸರ್ಕಾರ ನಿಯಮಾವಳಿಯಂತೆ ಹೊರದೇಶದಿಂದ ಬಂದವರಿಗೆ ಆರು ದಿನಗಳ ಕ್ವಾರಂಟೈನ್ ಕಡ್ಡಾಯವಾಗಿದೆ.

ಅಶ್ವಿನ್ ಅವರು ಮೂರು ಟೆಸ್ಟ್ ಗಳಲ್ಲಿ 12 ವಿಕೆಟ್ ಪಡೆದಿದ್ದರು. ಗಾಯಾಳು ಸಮಸ್ಯೆಯಿಂದಾಗಿ ನಾಲ್ಕನೇ ಟೆಸ್ಟ್ ನಲ್ಲಿ ಆಡಿರಿಲಿಲ್ಲ. ನಾಲ್ಕನೇ ಟೆಸ್ಟ್ ಆಡಿದ್ದ ಸುಂದರ್ ಅವರು 62 ಮತ್ತು ನಾಲ್ಕು ವಿಕೆಟ್ ಉರುಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.