ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದ ಬಂಧಿತ ಆರೋಫಿ ಪರಾರಿ: ಕಾರವಾರದಲ್ಲಿ ಆತಂಕ

ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದ ಬಂಧಿತ ಆರೋಫಿ ಪರಾರಿ: ಕಾರವಾರದಲ್ಲಿ ಆತಂಕ

SB   ¦    Jun 29, 2020 01:53:39 PM (IST)
ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದ ಬಂಧಿತ ಆರೋಫಿ ಪರಾರಿ: ಕಾರವಾರದಲ್ಲಿ ಆತಂಕ

ಕಾರವಾರ:ಇಲ್ಲಿನ ಕಿಮ್ಸ್ ನಲ್ಲಿ ದಾಖಲಾಗಿದ್ದ ಕೊರೊನಾ ಸೋಂಕಿತ ವ್ಯಕ್ತಿಯೊಬ್ಬ ಕೋವಿಡ್- 19 ವಾರ್ಡ್ ನಿಂದ ಪರಾರಿಯಾಗಿದ್ದಾನೆ.

ಇದರಿಂದ ಕಾರವಾರ ತಾಲೂಕಿನಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಶಿರಸಿಯಲ್ಲಿ ಬೈಕ್ ಕಳ್ಳತನ ಪ್ರಕರಣಕ್ಕೆ ಪೊಲೀಸರು ಕಳ್ಳನನ್ನು ಬಂಧಿಸಿದ್ದರು. ಸೋಂಕಿನ ಲಕ್ಷಣ ಇದ್ದ ಕಾರಣ ಕೋವಿಡ್ ಪರೀಕ್ಷೆ ನಡೆಸಿದ್ದಾಗ ಸೋಂಕು ದೃಢ ಪಟ್ಟಿತ್ತು.

ಅದಾದ ಬಳಿಕ ಕಾರವಾರದ ಕೊರೊನಾ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆದರೆ ಸೋಮವಾರ ವಾರ್ಡ್ ನಲ್ಲಿ 2 ಮೊಬೈಲ್ ಕದ್ದು ವಾರ್ಡ್ನ ಗಾಜು ಒಡೆದು ಪರಾರಿಯಾಗಿದ್ದಾರೆ. ಪೊಲೀಸರು ಹುಡುಕಾಟ ನಡೆಸಿದ್ದಾಗ ಕಳ್ಳ ಬಸ್ ಮೂಲಕ ಕದ್ರಾಕ್ಕೆ ತೆರಳಿದ್ದ. ಕದ್ರಾದಲ್ಲಿ ಬಂಧಿಸಲಾಗಿದೆ. ಬಸ್ಸಿನಲ್ಲಿ ತೆರಳಿದ್ದರಿಂದ ಕಾರವಾರದಲ್ಲಿ ಈಗ ಆತಂಕದ ವಾತಾವರಣ ಸೃಷ್ಟಿಯಾಗಿದೆ