
ಉಡುಪಿ: 2017-18ನೇ ಸಾಲಿನ ಏಕಲವ್ಯ ಪ್ರಶಸ್ತಿಯನ್ನು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಅವರು ಪ್ರಕಟಿಸಿದ್ದಾರೆ.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ನೀಡಲಾಗುವ ಏಕಲವ್ಯ ಪ್ರಶಸ್ತಿಗೆ 2 ಲಕ್ಷ ರೂಪಾಯಿ ನಗದು ಮತ್ತು ಏಕಲವ್ಯ ಕಂಚಿನ ಪ್ರತಿಮೆ ನೀಡಿ ಗೌರವಿಸಲಾಗುತ್ತದೆ.
2017-18ನೇ ಸಾಲಿನ ಏಕಲವ್ಯ ಪ್ರಶಸ್ತಿಗೆ ಸುಮಾರು 13 ಮಂದಿ ಕ್ರೀಡಾಪಟುಗಳನ್ನು ಆಯ್ಕೆ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಅಯ್ಯಪ್ಪ ಎಂ.ಬಿ.(ಹಾಕಿ), ಸುಕೇಶ್ ಹೆಗ್ಡೆ(ಕಬಡ್ಡಿ), ಗುರುರಾಜ(ಭಾರ ಎತ್ತುವುದು), ರೇವತಿ ನಾಯಕ ಎಂ(ಪ್ಯಾರಾ ಈಜುಪಟು), ಸಂದೀಪ್ ಬಿ ಕಾಟೆ(ಕುಸ್ತಿ), ಪೂರ್ವಿಶ್ ಎಸ್ ರಾಮ್(ಬ್ಯಾಡ್ಮಿಂಟನ್), ರಾಜೇಶ್ ಪ್ರಕಾಶ್ ಉಪ್ಪಾರ್(ಬಾಸ್ಕೆಟ್ ಬಾಲ್), ಹರ್ಷಿತಾ ಎಸ್(ಅಥ್ಲೆಟಿಕ್), ರೇಣುಕಾ ದಂಡಿನ್(ಸೈಕ್ಲಿಂಗ್), ಕಾರ್ತಿಕ್ ಎ(ವಾಲಿಬಾಲ್), ಮಾಳವಿಕ ವಿಶ್ವನಾಥ್(ಈಜು), ಮಯೂರ್ ಡಿ ಭಾನು(ಶೂಟಿಂಗ್), ಕೀರ್ತನಾ ಟಿ.ಕೆ. ರೋಯಿಂಗ್) ಇವರು ಏಕಲವ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.