ದೆಹಲಿಯ ಕ್ರಿಕೆಟಿಗ ಸಂಜಯ್ ಡೋಬಾಲ್ ಕೊರೋನಾಗೆ ಬಲಿ

ದೆಹಲಿಯ ಕ್ರಿಕೆಟಿಗ ಸಂಜಯ್ ಡೋಬಾಲ್ ಕೊರೋನಾಗೆ ಬಲಿ

HSA   ¦    Jun 29, 2020 07:01:37 PM (IST)
ದೆಹಲಿಯ ಕ್ರಿಕೆಟಿಗ ಸಂಜಯ್ ಡೋಬಾಲ್ ಕೊರೋನಾಗೆ ಬಲಿ

ನವದೆಹಲಿ: ಕ್ಲಬ್ ಕ್ರಿಕೆಟಿಗ ಹಾಗೂ ದೆಹಲಿ 23 ಹರೆಯದ ತಂಡಕ್ಕೆ ನೆರವು ಸಿಬ್ಬಂದಿಯಾಗಿ ಕಾರ್ಯನಿರ್ವಹಿಸಿದ್ದ ಸಂಜಯ್ ಡೋಬಾಲ್ ಅವರು ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ.

ಸಂಜಯ್ ಅವರಿಗೆ ಪ್ಲಾಸ್ಮಾ ದಾನ ಮಾಡುವಂತೆ ಗೌತಮ್ ಗಂಭೀರ್, ವೀರೇಂದ್ರ ಸೆಹ್ವಾಗ್ ಮೊದಲಾದವರು ಕೇಳಿಕೊಂಡಿದ್ದರು. ಪ್ಲಾಸ್ಮಾ ಚಿಕಿತ್ಸೆ ನೀಡಿದರೂ ಅವರು ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ.

ಅವರು ಪತ್ನಿ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ. ಕಿರಿಯ ಪುತ್ರ ಏಕಾಂಶ್ ದೆಹಲಿ 23ರ ಕೆಳಹರೆಯದ ತಂಡದ ಪರ ಆಡಿರುವರು.

ವಾರದ ಹಿಂದಷ್ಟೇ ಸಂಜಯ್ ಅವರನ್ನು ಕೊವಿಡ್ 19 ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.