ಗೆಲುವು ತಂದಿತ್ತ ರಿಷಬ್ ಪಂತ್ ಅದ್ಭುತ ಆಟ: ಸರಣಿ ಗೆದ್ದ ಭಾರತ

ಗೆಲುವು ತಂದಿತ್ತ ರಿಷಬ್ ಪಂತ್ ಅದ್ಭುತ ಆಟ: ಸರಣಿ ಗೆದ್ದ ಭಾರತ

HSA   ¦    Jan 19, 2021 01:20:22 PM (IST)
ಗೆಲುವು ತಂದಿತ್ತ ರಿಷಬ್ ಪಂತ್ ಅದ್ಭುತ ಆಟ: ಸರಣಿ ಗೆದ್ದ ಭಾರತ

ಬ್ರಿಸ್ಬೇನ್: ರಿಷಬ್ ಪಂತ್ ಅದ್ಭುತವಾದ ಬ್ಯಾಟಿಂಗ್ ನೆರವಿನಿಂದ ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್ ನಲ್ಲಿ ಟೀಂ ಇಂಡಿಯಾವು ಮೂರು ವಿಕೆಟ್ ಗೆಲುವು ದಾಖಲಿಸಿಕೊಂಡಿದೆ.

ರಿಷಬ್ ಪಂತ್ 89 ರನ್ ಮಾಡಿ ಟೀಂ ಇಂಡಿಯಾವು 329 ರನ್ ಮಾಡಿ ಗೆಲುವು ದಾಖಲಿಸಿ 2-1ರಿಂದ ನಾಲ್ಕು ಪಂದ್ಯಗಳ ಸರಣಿಯನ್ನು ಗೆಲ್ಲಲು ನೆರವಾದರು.

ರಿಷಬ್ ಪಂತ್ 9 ಬೌಂಡರಿ 1 ಸಿಕ್ಸರ್ ನ್ನು 138 ಎಸೆತಗಳಲ್ಲಿ ಬಾರಿಸಿದರೆ, ವಾಷಿಂಗ್ಟನ್ ಸುಂದರ್ 22 ರನ್ ಮಾಡಿ ಅಂತ್ಯದಲ್ಲಿ ಉತ್ತಮ ಜತೆ ನೀಡಿದರು. ಚೇತೇಶ್ವರ್ ಪೂಜಾರ(56) ರಹಾನೆ 24 ಮತ್ತು ಸುಭ್ಮನ್ ಗಿಲ್ 91 ರನ್ ಮಾಡಿ ತಂಡಕ್ಕೆ ನೆರವಾದರು.