ಸುಲಭ ಗೆಲುವಿನೊಂದಿಗೆ ರಣಜಿ ಟ್ರೋಫಿ ಕ್ವಾರ್ಟರ್ ಫೈನಲಿಗೇರಿದ ಕರ್ನಾಟಕ

ಸುಲಭ ಗೆಲುವಿನೊಂದಿಗೆ ರಣಜಿ ಟ್ರೋಫಿ ಕ್ವಾರ್ಟರ್ ಫೈನಲಿಗೇರಿದ ಕರ್ನಾಟಕ

HSA   ¦    Feb 14, 2020 07:01:16 PM (IST)
ಸುಲಭ ಗೆಲುವಿನೊಂದಿಗೆ ರಣಜಿ ಟ್ರೋಫಿ ಕ್ವಾರ್ಟರ್ ಫೈನಲಿಗೇರಿದ ಕರ್ನಾಟಕ

ಬೆಂಗಳೂರು: ಬರೋಡಾ ವಿರುದ್ಧ ಸುಲಭ ಗೆಲುವು ದಾಖಲಿಸಿಕೊಂಡ ಕರ್ನಾಟಕ ರಣಜಿ ಟ್ರೋಫಿಯ ಕ್ವಾರ್ಟರ್ ಫೈನಲಿಗೇರಿದೆ.

ಬರೋಡಾ ಮೊದಲ ಇನ್ನಿಂಗ್ಸ್ ನಲ್ಲಿ ಕೇವಲ 85 ರನ್ ಗಳಿಗೆ ಆಲೌಟ್ ಆದ ಬಳಿಕ ಕರ್ನಾಟಕ 233 ರನ್ ಪೇರಿಸಿ ಆಲೌಟ್ ಆಗಿತ್ತು. ಎರಡನೇ ಇನ್ನಿಂಗ್ಸ್ ನಲ್ಲಿ ಅಹ್ಮದ್ ನೂರ್ ಪಠಾಣ್(90) ದೀಪಕ್ ಹೂಡಾ(50) ಮತ್ತು ರಜಪೂತ್ 52 ರನ್ ಮಾಡಿ ತಂಡವು 296 ರನ್ ಮೊತ್ತ ಪೇರಿಸಲು ನೆರವಾದರು. ಕರ್ನಾಟಕದ ಪ್ರಸಿದ್ಧ ಕೃಷ್ಣ 4, ರೋನಿತ್ ಮೋರೆ 3 ಮತ್ತು ಕೆ.ಗೌತಮ್ ಎರಡು ವಿಕೆಟ್ ಉರುಳಿಸಿ ಬರೋಡಾವನ್ನು ಆಲೌಟ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದರು.

148 ರನ್ ಗಳ ಸುಲಭ ಗುರಿಯನ್ನು ಬೆನ್ನಟ್ಟಿದ ಕರ್ನಾಟಕ ಕರುಣ್ ನಾಯರ್ 71 ರನ್ ನೆರವಿನಿಂದ ಎರಡು ವಿಕೆಟ್ ಕಳಕೊಂಡು ಗೆಲುವು ತನ್ನದಾಗಿಸಿಕೊಂಡಿತು.