ಮಹಿಳೆಯರ ದೇಶಿ ಟ್ವೆಂಟಿ-೨೦: ಕರ್ನಾಟಕಕ್ಕೆ ವಿರೋಚಿತ ಸೋಲು

ಮಹಿಳೆಯರ ದೇಶಿ ಟ್ವೆಂಟಿ-೨೦: ಕರ್ನಾಟಕಕ್ಕೆ ವಿರೋಚಿತ ಸೋಲು

YK   ¦    Mar 14, 2019 06:10:15 AM (IST)
 ಮಹಿಳೆಯರ ದೇಶಿ ಟ್ವೆಂಟಿ-೨೦:  ಕರ್ನಾಟಕಕ್ಕೆ ವಿರೋಚಿತ ಸೋಲು

ಮುಂಬೈ: ಮಹಿಳೆಯರ ದೇಶಿ ಟ್ವೆಂಟಿ-೨೦ಕ್ರಿಕೆಟ್ ಲೀಗ್ ನಲ್ಲಿ ನಾಲ್ಕು ರನ್ ಗಳಲ್ಲಿ ಕರ್ನಾಟಕ ತಂಡ ಪಂಜಾಬ್ ಗೆ ಮಣಿಯಿತು. ಬುಧವಾರ ವಾಖಂಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯಾಟವು ತುಂಬಾನೇ ಕುತೂಹಲವನ್ನು ಕೆರಳಿಸಿತು.

ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿದ ಕರ್ನಾಟಕ ತಂಡದ ಪರಿಣಾಮಕಾರಿ ಬೌಲರ್ ಗಳು ಪಂಜಾಬ್ ಬ್ಯಾಟ್ಸ್ ವುಮನ್ ಗಳನ್ನು ೨೦ರನ್ ಗಳಲ್ಲಿ ೧೩೧ ರನ್ ಗಳಿಗೆ ಕಟ್ಟಿ ಹಾಕಿದರು.

ಕರ್ನಾಟಕ ತಂಡ ಕೆಚ್ಚೆದೆಯ ಹೋರಾಟದಲ್ಲಿ ೨೦ ರನ್ ಗಳಲ್ಲಿ ೭ ವಿಕೆಟ್ ಕಳೆದುಕೊಂಡು ೧೨೭ ರನ್ ಪಡೆದು ಅಂತಿಮವಾಗಿ ಸೋಲೋಪ್ಪಿಕೊಂಡಿತು.

ಹಣಾಹಣಿ ಪಂದ್ಯಾಟದಲ್ಲಿ ಎಡವಿದ ಕರ್ನಾಟಕ ತಂಡ ಮಹಿಳೆಯರ ದೇಶಿ ಟ್ವೆಂಟಿ–20 ಕ್ರಿಕೆಟ್ ಲೀಗ್‌ನ ಪ್ರಶಸ್ತಿಯನ್ನು ಕೈಚೆಲ್ಲಿತು.