ಬಾಂಗ್ಲಾ-ಪಾಕಿಸ್ತಾನ ಟೆಸ್ಟ್, ಏಕದಿನ ಸರಣಿ ಮುಂದೂಡಿಕೆ

ಬಾಂಗ್ಲಾ-ಪಾಕಿಸ್ತಾನ ಟೆಸ್ಟ್, ಏಕದಿನ ಸರಣಿ ಮುಂದೂಡಿಕೆ

HSA   ¦    Mar 16, 2020 03:09:21 PM (IST)
ಬಾಂಗ್ಲಾ-ಪಾಕಿಸ್ತಾನ ಟೆಸ್ಟ್, ಏಕದಿನ ಸರಣಿ ಮುಂದೂಡಿಕೆ

ಕರಾಚಿ: ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಮಧ್ಯೆ ನಡೆಯಬೇಕಾಗಿದ್ದ ಟೆಸ್ಟ್ ಹಾಗೂ ಏಕದಿನ ಸರಣಿಯನ್ನು ಕೊರೋನಾ ವೈರಸ್ ಭೀತಿಯಿಂದ ಮುಂದೂಡಲು ಎರಡೂ ರಾಷ್ಟ್ರದ ಬೋರ್ಡ್ ಗಳು ನಿರ್ಧಾರ ಮಾಡಿವೆ.

ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್ ಏಕದಿನ ಮತ್ತು ಟೆಸ್ಟ್ ಸರಣಿಯನ್ನು ಮುಂದೂಡಲು ನಿರ್ಧರಿಸಿವೆ ಎಂದು ಪಿಸಿಬಿ ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ ತಿಳಿಸಿದೆ.

ಮೊದಲ ಟೆಸ್ಟ್ ಪಂದ್ಯವು 7-10 ಫೆಬ್ರವರಿ ತನಕ ರಾವಲ್ಪಿಂಡಿಯಲ್ಲಿ ನಡೆದಿತ್ತು. ಈ ಪಂದ್ಯವನ್ನು ಪಾಕಿಸ್ತಾನ ಇನ್ನಿಂಗ್ಸ್ ಮತ್ತು 44 ರನ್ ಗಳಿಂದ ಗೆದ್ದುಕೊಂಡಿತ್ತು.

ಪಾಕಿಸ್ತಾನ ಕಪ್ ಏಕದಿನ ಟೂರ್ನಮೆಂಟ್ ನ್ನು ಕೂಡ ಪಾಕಿಸ್ತಾನವು ಮುಂದೂಡಿದೆ. ಇದು ಮಾರ್ಚ್ 25ರಿಂದ ಆರಂಭವಾಗಬೇಕಿತ್ತು.