ಜ. 12ರಂದು ಭಾರತ ಪುರುಷರ, ಮಹಿಳಾ ಕ್ರಿಕೆಟ್ ತಂಡಗಳ ಆಯ್ಕೆ

ಜ. 12ರಂದು ಭಾರತ ಪುರುಷರ, ಮಹಿಳಾ ಕ್ರಿಕೆಟ್ ತಂಡಗಳ ಆಯ್ಕೆ

HSA   ¦    Jan 10, 2020 03:03:01 PM (IST)
ಜ. 12ರಂದು ಭಾರತ ಪುರುಷರ, ಮಹಿಳಾ ಕ್ರಿಕೆಟ್ ತಂಡಗಳ ಆಯ್ಕೆ

ನವದೆಹಲಿ: ನ್ಯೂಜಿಲೆಂಡ್ ಪ್ರವಾಸ ಮತ್ತು ಐಸಿಸಿ ಟಿ20 ವಿಶ್ವಕಪ್ ಭಾರತ ಪುರುಷರ ಹಾಗೂ ಮಹಿಳಾ ತಂಡದ ಆಯ್ಕೆಯು ಜ.12ರಂದು ನಡೆಯಲಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಹೇಳಿದೆ.

ವಿರಾಟ್ ಕೊಹ್ಲಿ ಬಳಗವು ಐದು ಟಿ20, ಮೂರು ಏಕದಿನ ಮತ್ತು ಎರಡು ಟೆಸ್ಟ್ ಪಂದ್ಯಗಳನ್ನು ಆಡಲು ಜನವರಿ 31ರಿಂದ ನ್ಯೂಜಿಲೆಂಡ್ ಪ್ರವಾಸಗೈಯಲಿದೆ.

ಐಸಿಸಿ ಮಹಿಳಾ ಟಿ-20 ವಿಶ್ವಕಪ್ ಫೆಬ್ರವರಿ 21ರಿಂದ ಆಸ್ಟ್ರೇಲಿಯಾದಲ್ಲಿ ಆರಂಭವಾಗಲಿದೆ.